ನಿಮ್ಮ ಜಿಲ್ಲೆ

ದೇವೇಗೌಡ್ರ ಬೇಡಿಕೆಗೆ ನೋ ಎಂದ ಸಿಎಂ..

Published

on

ಬೆ0ಗಳೂರು: ಮೊನ್ನೆಯಷ್ಟೆ ಕೇರಳ-ಕರ್ನಾಟಕ ಗಡಿ ವಿಚಾರವಾಗಿ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು ಇನ್ನೊಂದು ಬೇಡಿಕೆಯಿದ್ದ ಇನ್ನೊಂದು ಪತ್ರವನ್ನು ಸಿಎಂಗೆ ಬರೆದಿದ್ದಾರೆ.ಆದರೆ ಸಿಎಂ ಯಡಿಯೂರಪ್ಪ ಮಾತ್ರ ದೇವೇಗೌಡರ ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಅಂದ ಹಾಗೇ ಮಾರ್ಚ್ ೬ ರಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು ಕಾರ್ಮಿಕರಿಗೆ ಐದು ಸಾವಿರ ಧನ ಸಹಾಯ ನೀಡಲು ಯಡಿಯೂರಪ್ಪರಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.ಹೀಗಾಗಿ ಈ ಪತ್ರಕ್ಕೆ ಉತ್ತರ ನೀಡಿರುವ ಯಡಿಯೂರಪ್ಪ, ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ಬದಲಾಗಿ ಎರಡು ಸಾವಿರ ರೂಪಾಯಿ ಧನ ಸಹಾಯವನ್ನು ನೀಡಲು ಕ್ರಮವಹಿಸಲಾಗಿದೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಐದು ಸಾವಿರ ನೀಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ತಾವು ಪ್ರಸ್ತಾಪಿಸಿರುವ ಹಾಲು ಉತ್ಪಾದನೆ, ವಿತರಣೆ ಇತ್ಯಾದಿಗಳ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿರುವ ಹಾಲನ್ನು ಬಡವರು ಮತ್ತು ಕಾರ್ಮಿಕರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್‌ನಂತೆ ವಿತರಿಸಲು ಸೂಚನೆ ನೀಡಲಾಗಿರುತ್ತದೆ. ಅದೇ ರೀತಿ ರೈತರು ಬೆಳೆದ ಬೆಳೆ, ಹಣ್ಣು, ತರಕಾರಿ ಇತ್ಯಾದಿ ಅಗತ್ಯ ಉತ್ಪನ್ನಗಳನ್ನು ಸುಮಾರು ೫೦೦ ಹಾಪ್‌ಕಾಮ್‌ಗಳ ಮೂಲಕ ಸೂಕ್ತ ದರಕ್ಕೆ ಖರೀದಿಸಿ ವಿತರಿಸಲು ಕ್ರಮವಹಿಸಲಾಗಿದೆ. ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Click to comment

Trending

Exit mobile version