ಆರೋಗ್ಯ / HEALTH

ಕೊರೊನಾ ಅಬ್ಬರ ನಡುವೆ ಮೇಯರ್-ಡಿಸಿ `ಪಾಸ್ ಗುದ್ದಾಟ’..

Published

on

ದಾವಣಗೆರೆ: ಒಂದು ಕಡೆ ಕೊರೊನಾ ಅಬ್ಬರಿಸಿ ಜೀವಗಳನ್ನ ಬಲಿ ಪಡೆಯುತ್ತಿದ್ರೆ,ಇನ್ನೊಂದು ಕಡೆ ದಾವಣಗೆರೆ ಮೇಯರ್ ಹಾಗೂ ಜಿಲ್ಲಾಧಿಕಾರಿ ನಡುವೆ ಪಾಸ್ ವಿಷಯದಲ್ಲಿ ಗುದ್ದಾಟ ಆರಂಭಗೊAಡಿದೆ.
ಸದ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸೇವೆಗಳಿಗೆ ಪಾಸ್ ವಿತರಣೆ ಮಾಡಿದ್ದರು. ಮೇಯರ್ ಕೂಡ ಪಾಲಿಕೆ ವತಿಯಿಂದ ವ್ಯಾಪಾರಸ್ಥರಿಗೆ ಸಾವಿರಾರು ಪಾಸ್ ವಿತರಿಸಿದ್ದರು. ಆದರೆ ಮೇಯರ್ ನೀಡಿದ ಪಾಸ್ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಮೇಯರ್ ನೀಡಿದ್ದ ಪಾಸ್‌ಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಸಿಂಧುಗೊಳಿಸಿದ್ದರು.
ಇನ್ನು ಇದೇ ವಿಷಯವಾಗಿಯೇ ಮೇಯರ್ ಬಿ.ಜಿ.ಅಜಯ್ ಕುಮಾರ್ ಮತ್ತು ಡಿಸಿ ಮಹಾಂತೇಶ್ ಬೀಳಗಿ ನಡುವೆ ಜಗಳ ನಡೆದಿದೆ.
ಅಂದ ಹಾಗೇ ಇಂದು ಸುದ್ದಿಗೋಷ್ಟಿ ಮಾತನಾಡಿದ ನಾನು ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ. ಕಳೆದ ೧೫ ದಿನಗಳಿಂದ ಪಾಸ್‌ಗಾಗಿ ಪಾಲಿಕೆ ಪರದಾಡಿದೆ. ಆದರೆ ಜಿಲ್ಲಾಡಳಿತ ಪಾಸ್ ಕೊಡಲಿಲ್ಲ. ನಾನು ವ್ಯಾಪಾರಿಗಳ ಕಷ್ಟ ನೋಡಲಾಗದೆ ಪಾಸ್ ನೀಡಿರುವೆ. ಆದರೆ ನಾನು ಪಾಸ್ ಮಾರಾಟ ಮಾಡಿಕೊಂಡಿಲ್ಲ. ಮೇಯರ್ ಸ್ಥಾನದಲ್ಲಿ ಕುಳಿತ ನನಗೆ ಕನಿಷ್ಠ ಜ್ಞಾನ ಇದೆ ಎಂದು ಡಿಸಿಗೆ ತಿರುಗೇಟು ನೀಡಿದ್ದಾರೆ.
ಇದಲ್ಲದೆ, ಜಿಲ್ಲಾಡಳಿತದಿಂದ ಪಾಲಿಕೆಗೆ ನೀಡಿರುವುದು ಕೇವಲ ೭೦೦ ಪಾಸ್‌ಗಳು ಮಾತ್ರ. ನಗರದಲ್ಲಿ ೪೫ ವಾರ್ಡ್ಗಳಿವೆ. ಅವಶ್ಯಕ ಓಡಾಟಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಮೇಯರ್ ಆಗಿ ಒಂದು ಪಾಸ್ ಕೊಡಿಸಲು ಆಗಲ್ವಾ ಅಂತ ಜನರೇ ಪ್ರಶ್ನೆ ಮಾಡಲು ಶುರು ಮಾಡಿದರು.
ಹಾಗಾಗಿ ೨೫೦ ಪಾಸ್‌ಗಳನ್ನು ಪಾಲಿಕೆ ವತಿಯಿಂದ ಎಲ್ಲಾ ದಾಖಲಾತಿ ಪಡೆದು ವಿತರಿಸಲಾಗಿದೆ ಎಂದು ಹೇಳಿದರು.ನಾವೇನೂ ಐದು ಸಾವಿರ, ಹತ್ತು ಸಾವಿರ ಪಾಸ್‌ಗಳನ್ನು ಪ್ರಿಂಟ್ ಮಾಡಿ ಕೊಟ್ಟಿಲ್ಲ. ಅಂಗಡಿಗಳ ಮಾಲೀಕರಿಗೆ ನೀಡಿದ್ದೇವೆ. ಯಾವ ನಕಲಿ ಪಾಸ್‌ಗಳನ್ನೂ ನೀಡಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಒತ್ತಡ ಹೆಚ್ಚಿದ ಕಾರಣ ನಾವು ಬೇಡಿಕೆಯಿಟ್ಟು ನಾಲ್ಕೈದು ದಿನ ಕಳೆದರೂ ಪಾಸ್ ನೀಡದ ಕಾರಣ ಈ ಕ್ರಮಕೈಗೊಳ್ಳಬೇಕಾಯಿತು ಅಂತ ಮೇಯರ್ ಹೇಳಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ದಾವಣಗೆರೆ

Click to comment

Trending

Exit mobile version