ಆರೋಗ್ಯ / HEALTH

ಏಪ್ರಿಲ್ ಅಂತ್ಯದೊಳಗೆ ಕರ್ನಾಟಕದಲ್ಲಿ 10 ಸಾವಿರ ಮಂದಿಗೆ ಕೊರೊನಾ

Published

on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಕಿಂತರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ರಾಜ್ಯ ಸರ್ಕಾರ ಬೆಚ್ಚಿ ಬೀಳಿಸುವ ಸುದ್ದಿ ನೀಡಿದೆ.
ಸದ್ಯ ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಏಪ್ರಿಲ್ ಅಂತ್ಯದೊಳಗೆ ರಾಜ್ಯದ ೧೦ ಸಾವಿರ ಮಂದಿಗೆ ಕೊರೊನಾ ಬರಬಹುದು ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ.
ಈ ಹಿಂದೆ ಮಾರ್ಚ್ ೮ ರಂದು ರಾಜ್ಯದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು,ಖಾಸಗಿ ಕಂಪನಿಯ ಟೆಕ್ಕಿಗೆ ಕೊರೊನಾ ಬಂದಿತ್ತು. ಇದಾದ ೧೭ ದಿನದಲ್ಲಿ ಕೊರೊನಾ ಪೀಡಿತರ ಸಂಖ್ಯೆ ೫೦ಕ್ಕೆ ಏರಿಕೆ ಆಗಿತ್ತು. ಮಾರ್ಚ್ ೩೧ಕ್ಕೆ ೧೦೦ನೇ ಪ್ರಕರಣ ಬಂದಿತ್ತು.
ಅಂದರೆ ಮಾರ್ಚ್ ೨೫ ರಿಂದ ೩೧ರವರೆಗಿನ ೬ ದಿನದಲ್ಲಿ ೫೦ ಮಂದಿಗೆ ಪಾಸಿಟಿವ್ ಬಂದಿತ್ತು.
ಇದಾದ ಬಳಿಕ ಏಪ್ರಿಲ್ ೫ಕ್ಕೆ ೧೫೦ ಮಂದಿಗೆ ಕೊರೊನಾ ಬಂದಿದ್ದರೆ ಕಳೆದ ನಾಲ್ಕು ದಿನದಲ್ಲೇ ೪೭ ಮಂದಿಗೆ ಸೋಂಕು ತಗಲಿದ್ದು ಕೊರೊನಾ ನಿಯಂತ್ರಣ ಸಾಧ್ಯವೇ ಎನ್ನುವ ಪ್ರಶ್ನೆ ಎದ್ದಿದೆ. ಆದರೆ ಇದರ ನಡುವೆ  ಸ್ವತಃ ರಾಜ್ಯ ಸರ್ಕಾರವೇ ಏಪ್ರಿಲ್ ಅಂತ್ಯದೊಳಗೆ ರಾಜ್ಯದ ೧೦ ಸಾವಿರ ಮಂದಿಗೆ ಕೊರೊನಾ ಬರಬಹುದು ಎಂದಿರೋದು ನಿಜಕ್ಕೂ ಆಂತಕ್ಕೆ ತಳ್ಳುವಂತಾಗಿದೆ.
ಇದೇ ವೇಳೆ ಈ ವರದಿಯಲ್ಲಿ ಕೋರ್ಟ್ಗೆ ಇನ್ನಷ್ಟು ಮಾಹಿತಿ ನೀಡಿರುವ ಸರ್ಕಾರ, ಎನ್ ೯೫ ಮಾಸ್ಕ್, ಪಿಪಿಇ ಕಿಟ್, ಮೂರು ಪದರದ ಮಾಸ್ಕ್ ಕೊರತೆ ಇರುವ ಹಿನ್ನೆಲೆಯಲ್ಲಿ ಖರೀದಿ ನಡೆಸಲು ಸಿದ್ಧತೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಪ್ರತಿನಿತ್ಯ ೫೦ ಸಾವಿರ ಲೀಟರ್ ಸ್ಯಾನಿಟೈಸರ್ ಉತ್ಪಾದನೆ ಆಗುತ್ತಿದೆ ಎಂದು ವಿವರ ನೀಡಿದೆ.
ಇನ್ನು ವರದಿ ಸಲ್ಲಿಸಿದ ರಾಜ್ಯ ಸರ್ಕಾರಕ್ಕೆ ಕೆಲವು ಸೂಚನೆ ನೀಡಿರುವ ಹೈಕೋರ್ಟ್ ,ರಾಜ್ಯದಲ್ಲಿ ಹೆಚ್ಚಿನ ಗಾರ್ಮೆಂಟ್ಸ್ ಗಳಿರುವ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್ ಗಳನ್ನು ಬಳಸಿ ಕಿಟ್ ಉತ್ಪಾದಿಸಬೇಕು. ಕಚ್ಚಾ ವಸ್ತುಗಳ ಅನಿಯಂತ್ರಿತ ಸಾಗಾಟಕ್ಕೆ ಅವಕಾಶ ನೀಡಬೇಕು.ಜೊತೆಗೆ ಖಾಸಗಿ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಒದಗಿಸಬೇಕು. ನಿಗದಿತ ದರ ವಿಧಿಸಿ ಪಿಪಿಇ ಕಿಟ್ ಒದಗಿಸಬಹುದೇ? ಈ ಬಗ್ಗೆ ನಿಲುವು ತಿಳಿಸುವಂತೆ ಸೂಚನೆ ನೀಡಿದೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Click to comment

Trending

Exit mobile version