ಆರೋಗ್ಯ / HEALTH

ಇನ್ನೂ ಮುಂದೆ ಉಚಿತ ಹಾಲಿಗೂ ಕತ್ತರಿ?

Published

on

ಬೆಂಗಳೂರು: ಉಚಿತ ಹಾಲು ವಿತರಿಸುವುದನ್ನು ಸ್ಥಗಿತಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದೆ.
ಸದ್ಯ ಪತ್ರದಲ್ಲಿ ಉಚಿತ ಹಾಲು ಪಡೆಯಲು ಹೆಚ್ಚಿನ ಜನರು ಬರುತ್ತಿದ್ದಾರೆ.ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.ಒಮ್ಮೆಲೇ ಎಲ್ಲರೂ ಮುಗಿಬೀಳುತ್ತಿದ್ದಾರೆ.ಹೀಗಾಗಿ ಉಚಿತ ಹಾಲು ಕೊಡುವುದನ್ನು ಸ್ಥಗಿತಗೊಳಿಸಿ ಎಂದು ಬಿಬಿಎಂಪಿ ಪತ್ರದಲ್ಲಿ ತಿಳಿಸಿದೆ.
ಇನ್ನು ಪತ್ರದ ಬಗ್ಗೆ ಸಿಎಂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಆದರೆ ಬಿಬಿಎಂಪಿ ಮಾತ್ರ ಉಚಿತ ಹಾಲು ಕೊಡೋದು ಬೇಡ ಎಂದು ಪಟ್ಟು ಹಿಡಿದಿದೆ.ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ವಾಗುತ್ತಿರುವ ಸಮಯದಲ್ಲಿ ಉಚಿತ ಹಾಲು ವಿತರಣೆ ನಿಲ್ಲಿಸುವುದು ಸೂಕ್ತ ಎಂದು ಬಿಬಿಎಂಪಿ ತಿಳಿಸಿದೆ ಎನ್ನಲಾಗಿದೆ.
ಇದೇ ವೇಳೆ ಬಿಬಿಎಂಪಿ ಮನವಿ ಸಿಎಂ ಯಡಿಯೂರಪ್ಪ ಸ್ಪಂದಿಸಿದರೇ ಮುಂದಿನ ದಿನಗಳಲ್ಲಿ ಉಚಿತ ಹಾಲು ವಿತರಣೆ ನಿಲ್ಲಲ್ಲಿದೆ ಎಂದು ತಿಳಿದು ಬಂದಿದೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Click to comment

Trending

Exit mobile version