ಆರೋಗ್ಯ / HEALTH

ಮೇ.3ರವರೆಗೆ ಲಾಕ್ ಡೌನ್..

Published

on

ನವದೆಹಲಿ: ಲಾಕ್ ಡೌನ್ ಘೋಷಣೆಯಾಗಿ ಇಂದಿಗೆ ೨೧ ದಿನಗಳನ್ನು ಪೂರೈಸಿಯಾಗಿದೆ.
ಇಂದು ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದು, ಲಾಕ್ ಡೌನ್ ಸಡಿಲಿಸಬಹುದೆಂಬ ಆಸೆಯಿಂದ ಜನ ವೀಕ್ಷಿಸುತ್ತಿದ್ದರು. ಆದ್ರೆ ಮೇ ೩ ರವರೆಗೆ ಲಾಕ್ ಡೌನ್ ಮತ್ತೆ ವಿಸ್ತರಣೆಯಾಗಿದೆ.
ಇನ್ನು ಲಾಕ್‌ಡೌನ್‌ನಿಂದ ಮಹಾಮಾರಿಯನ್ನು ತಡೆಗಟ್ಟಬಹುದು.ಜನರು ಕೂಡ ಸ್ಪಂದಿಸಿರುವುದು ಖುಷಿಯ ವಿಚಾರ ಎಂದು ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಲಾಕ್ ಡೌನ್ ಕ್ರಮವನ್ನು ಮುಂದಿನ ತಿಂಗಳು ೩ನೆ ತಾರೀಖಿನವರೆಗೂ ವಿಸ್ತರಿಸಿದ್ದಾರೆ.
ಇದೇ ವೇಳೆ ಕೊರೊನಾ ಹೆಚ್ಚಾಗಿ ಹರಡುತ್ತಿರುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ.ಈ ಪ್ರದೇಶಗಳಲ್ಲಿ ಈ ಹಿಂದಿನಿಗಿAತಲೂ ಹೆಚ್ಚು ಗಮನ ಹರಿಸಲಾಗುವುದು.ಈ ಸಂಬAಧ ನಾಳೆ ಎಲ್ಲ ರಾಜ್ಯಗಳಿಗೂ ಹೊಸ ಮಾರ್ಗಸೂಚಿಗಳನ್ನು ನೀಡುವುದಾಗಿ ಪ್ರಧಾನಿ ತಿಳಿಸಿದ್ದಾರೆ.
ಅಲ್ದೆ.. ಬೇರೆ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದ ಸ್ಥಿತಿ ಉತ್ತಮವಾಗಿದೆ.ದೇಶದಲ್ಲಿ ೫೫೦ ಸೋಂಕು ಪ್ರಕರಣ ಕಂಡು ಬಂದಾಗಲೇ ೨೧ ದಿನಗಳ ಕಾಲ ಲಾಕ್‌ಡೌನ್ ಆದೇಶ ಹೊರಡಿಸಿದ್ದೇವೆ. ಈಗ ಭಾರತದ ಸ್ಥಿತಿ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ದೆಹಲಿ

Click to comment

Trending

Exit mobile version