ಆರೋಗ್ಯ / HEALTH

ಲಾಕ್‌ಡೌನ್ ಮುಂದುವರಿಕೆ, ಕ್ಷೌರಿಕ ವೃತ್ತಿಯುವರಿಗೆ ಹೆಚ್ಚು ಸಮಸ್ಯೆ

Published

on

ತಿಪಟೂರು: ಮನೆಯೇ ಮೊದಲ ಪಾಠಶಾಲೆ,ತಾಯಿಯೇ ಮೊದಲ ಗುರು ಆದ್ದರಿಂದ ಲಾಕ್ ಡೋನ್ ಅವಧಿ ಮುಗಿಯುವವರೆಗೂ ಕುಟುಂಬ ಸದಸ್ಯರು,ಮತ್ತು ಮಕ್ಕಳು ಅನವಶ್ಯಕವಾಗಿ ಸುತ್ತಾಡದಂತೆ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ರಂಗಭೂಮಿ ಕಲಾವಿದೆ ಟಿ.ಹೆಚ್.ಹೇಮಲತಾ ತಿಳಿಸಿದರು.
ಅವರು ನೊಣವಿನಕೆರೆ ಹೋಬಳಿ ಸವಿತಾ ಸಮಾಜದ ಬಡವರುಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು,ಲಾಕ್ ಡೋನ್ ನಿಯಮವನ್ನು ಎಲ್ಲರೂ ಪಾಲಿಸಬೇಕು ಎಂದರು.
ತಾಲ್ಲೂಕು ಸವಿತಾ ಸಮಾಜ ಸಂಘದ ಅಧ್ಯಕ್ಷ ಎ.ಲೋಕೇಶ್ ಮಾತನಾಡಿ,ಕೊರಾನಾ ವೈರಸ್ ರೋಗ ಹರಡದಂತೆ ಎಲ್ಲರೂ ಮುಂಜಾಗ್ರತಾ ಕ್ರಮ ವಹಿಸಬೇಕು,ಕೈಯನ್ನು ಆಗಿಂದಾಗ್ಗೆ ಸಾಬೂನಿನಿಂದ ತೊಳೆದುಕೊಳ್ಳಬೇಕು,ಕಣ್ಣು,ಮೂಗು ಮತ್ತು ಬಾಯಿಯನ್ನು ಮುಟ್ಟುತ್ತಿರಬಾರದು, ಎಚ್ಚರ ವಹಿಸುವ ಮೂಲಕ ಈ ರೋಗವನ್ನು ಹೊಡಿಸಬಹುದಾಗಿದೆ ಎಂದರು.
ಸAಘದ ಪ್ರಧಾನ ಕಾರ್ಯದರ್ಶಿ ಟಿ.ಜೆ.ವಿಜಯಕುಮಾರ್ ಮಾತನಾಡಿ,ಕ್ಷೌರಿಕ ವೃತ್ತಿ ಮಾಡಿ ಜೀವನ ನಡೆಸುವವರನ್ನು ಕಾರ್ಮಿಕ ಇಲಾಖೆ ಯಿಂದ ಅಸಂಘಟಿತ ಕಾರ್ಮಿಕರೆಂದು ಗುರುತಿಸಿ,ಅಂಬೇಡ್ಕರ್ ಸಹಾಯಹಸ್ತ ಕಾರ್ಡ್ ವಿತರಿಸಿದ್ದು,ಇತರೆ ಕಾರ್ಮಿಕರಿಗೆ ದೊರೆಯುವಂತಹ ಯಾವುದೇ ಸೌಲಭ್ಯ ದೊರೆತಿರುವುದಿಲ್ಲ.ಲಾಕ್‌ಡೌನ್ ಅವಧಿ ಮುಂದುವರೆಸಿರುವುದರಿAದ ಕ್ಷೌರಿಕ ವೃತ್ತಿ ಮಾಡುವವರಿಗೆ ಹೆಚ್ಚು ಸಮಸ್ಯೆಯಾಗಿದೆ.ಸರ್ಕಾರವು ಕೂಡಲೇ ಕಾರ್ಮಿಕ ಇಲಾಖೆ ವತಿಯಿಂದ ತುರ್ತು ಪರಿಹಾರ ಹಣ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ,ಎಲ್ಲರೂ ತಪ್ಪದೇ ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೊಣವಿನಕೆರೆ ಹೋಬಳಿ ಅಧ್ಯಕ್ಷ ರಾಮು, ನಿವೃತ್ತ ಮುಖ್ಯೋಪಾಧ್ಯಯರಾದ ವೆಂಕಟರಾಮು, ಟಿ.ಎನ್.ಕಾಂತರಾಜು ಮತ್ತಿತರರು ಇದ್ದರು.

ಸಿದ್ದೇಶ್ವರ್ ಎಕ್ಸ್ ಪ್ರೆಸ್ ಟಿವಿ ತಿಪಟೂರು (ತುಮಕೂರು)

Click to comment

Trending

Exit mobile version