ದೇಶ - ವಿದೇಶ

ಸರ್ಕಾರಕ್ಕೆ ಕೊರೊನಾ ಚಿಂತೆ,ಕೆಲ ಶಾಲೆಗಳು ಹಣ ವಸೂಲಿಗೆ ನಿಂತಿವೆಯAತೆ..

Published

on

ಬೆAಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವುದು ಹೇಗೆ?ಲಾಕ್‌ಡೌನ್ ವೇಳೆ ಪರಿಸ್ಥಿತಿ ನಿಭಾಯಿಸೋದೇಗೆ?ಅಂತೆಲ್ಲಾ ರಾಜ್ಯ ಸರ್ಕಾರ ತಲೆಕಡೆಸಿಕೊಂಡಿದ್ರೆ ಇತ್ತ ಬೆಂಗಳೂರಿನಲ್ಲಿ ಕೆಲವು ಖಾಸಗಿ ಶಾಲೆಗಳು ಶಾಲೆಯ ಶುಲ್ಕ, ಪರೀಕ್ಷಾ ಪೂರ್ವ ಕ್ಲಾಸ್‌ಗಳು, ಅಡ್ಮಿಷನ್ ಹಾಗೂ ಆನ್‌ಲೈನ್ ಕೋಚಿಂಗ್ ಕ್ಲಾಸ್‌ಗೆ ಹಣ ವಸೂಲಿಗೆ ನಿಂತಿವೆ.
ಸದ್ಯ ಇದರ ಬಗ್ಗೆ ರಾಜ್ಯದ ಪ್ರೈಮರಿ- ಸೆಕೆಂಡರಿ ಶಾಲೆಗಳ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದು, ಈ ದೂರಿನಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಇನ್ನುನಾಲ್ಕು ಶಾಲೆಗಳು ಹಾಗೂ ಆನ್‌ಲೈನ್ ಟ್ಯುಟೋರಿಯಲ್‌ಗಳ ವಿರುದ್ಧ ದೂರು ಸಲ್ಲಿಕೆಯಾಗಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆ ಶಿಕ್ಷಣ ಇಲಾಖೆಯ ಸೂಚನೆಗಳನ್ನು ಎಷ್ಟೇ ಕಷ್ಟವಾದ್ರೂ ಪಾಲಿಸುತ್ತಾ ಇದ್ದೇವೆ. ಇದರಿಂದ ಶಾಲೆಯ ಸಿಬ್ಬಂದಿಗೆ ವೇತನ ನೀಡಲು, ಬಿಲ್ ಪಾವತಿ ಮಾಡಲು ಕಷ್ಟವಾಗುತ್ತಿದೆ.ಸರ್ಕಾರದ ಶಿಕ್ಷಣ ಇಲಾಖೆಯೇ ಆರ್‌ಟಿಇ ಮರುಪಾವತಿಯ ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.ಆದರೆ ಕೆಲ ಶಾಲೆಗಳು ಮಾತ್ರ ಅಡ್ಮಿಷನ್, ಫೀಸ್ ಕಲೆಕ್ಷನ್ ಮಾಡುತ್ತಿವೆ.ಇಂತಹವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ಪತ್ರ ಬರೆಯಲಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version