ಆರೋಗ್ಯ / HEALTH

ಹುಬ್ಬಳ್ಳಿಯಲ್ಲಿ ಬಾಲಕಿ ಸೇರಿ ಇಬ್ಬರಿಗೆ ಕೊರೊನಾ

Published

on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು,ಪಿ-೨೩೬ ಸಂರ್ಪಕದಿAದ ಸೋಂಕು ಹರಡಿದೆ. ೨೯ ವರ್ಷದ ಯುವತಿ ಹಾಗೂ ೧೩ ವರ್ಷದ ಬಾಲಕಿಗೆ ಕೊರೊನಾ ಧೃಡಪಟ್ಟಿದೆ. ಇದರಿಂದ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೯ಕ್ಕೆ ಏರಿದೆ.
ಇನ್ನು ಇಬ್ಬರ ವರದಿ ಪಾಸಿಟಿವ್ ಬಂದ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಜಿಲ್ಲಾಡಳಿತ ಪತ್ರ ಬರೆದು, ಇಬ್ಬರ ಮೊಬೈಲ್ ಸಿಡಿಆರ್ ನೀಡುವಂತೆ ಕೋರಲಾಗಿದೆ. ಮಾರ್ಚ್ ೨೦ ರಿಂದ ಇಬ್ಬರು ಸೋಂಕಿತರ ಕಾಲ್ ಡೇಟಾ ರೆಕಾರ್ಡಿಂಗ್ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಇಬ್ಬರ ಜೊತೆ ಪ್ರಾಥಮಿಕ ಸಂರ್ಪಕದಲ್ಲಿರುವವರ ಪತ್ತೆ ಹಚ್ಚಲು ಜಿಲ್ಲಾಡಳಿತ ಮುಂದಾಗಿದೆ. ಇಲ್ಲಿಯವರೆಗೂ ಹುಬ್ಬಳ್ಳಿಯಲ್ಲಿ ಒಬ್ಬನಿಂದಲೇ ೮ ಜನರಿಗೆ ಸೋಂಕು ತಗುಲಿದಂತಾಗಿದೆ. ಇದಕ್ಕೆಲ್ಲ ಪಿ-೧೯೪ ಮೂಲ ಕಾರಣನಾಗಿದ್ದಾನೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version