ಆರೋಗ್ಯ / HEALTH

ಮೈಸೂರಿನಲ್ಲಿ ಕೊರೊನಾ ಕೇಸ್ ಸಂಖ್ಯೆ ಇಳಿಕೆ..?

Published

on

ಮೈಸೂರು: ಪಾಸಿಟಿವ್ ಕೇಸ್‌ಗಳ ಪ್ರಮಾಣ ಇಳಿಕೆಯಾಗಿದೆ.ಪಿಪಿಇ, ಮಾಸ್ಕ್ಗಳ ಕೊರತೆ ಇಲ್ಲ ಎಂದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಾರದಲ್ಲಿ ೨೦ ಪಾಸಿಟಿವ್ ಕೇಸ್ ಬರುತ್ತಿದ್ದವು. ಈಗ ಅಂತಹ ಪರಿಸ್ಥಿತಿಯಿಂದ ಹೊರ ಬಂದಿದ್ದೇವೆ ಎಂದರು.
ಇನ್ನು ನಿತ್ಯವೂ ಮೂರು ಶಿಫ್ಟ್ಗಳಲ್ಲಿ ಮಾದರಿ ಸಂಗ್ರಹಣೆ ನಡೆಯುತ್ತಿದೆ.ಸ್ಯಾಂಪಲ್ ಕಲೆಕ್ಷನ್,ರಿಪೋರ್ಟ್ ತರಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.ಅಲ್ಲದೆ, ಜ್ಯುಬಿಲಿಯೆಂಟ್ ಕಾರ್ಖಾನೆ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ಟೆಸ್ಟಿಂಗ್ ಮುಕ್ತಾಯವಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಮೈಸೂರಿಗೆ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ ಇನ್ನೂ ಬಂದಿಲ್ಲ.ಬೇರೆ ಜಿಲ್ಲೆಗಳಿಗೆ ಕೊಟ್ಟಿದ್ದಾರೆ. ನಮ್ಮಲ್ಲಿ ಇನ್ನಷ್ಟೆ ಸ್ವೀಕೃತಿ ಆಗಬೇಕಿದೆ.
ಜೊತೆಗೆ ಐಸೋಲೇಷನ್ ಆಸ್ಪತ್ರೆ ಜತೆಗೆ ಇಎಸ್‌ಐ ಆಸ್ಪತ್ರೆಯಲ್ಲಿ ೧೦೦ ಬೆಡ್ ರೆಡಿ ಇಟ್ಟುಕೊಂಡಿದ್ದೇವೆ.ಅಲ್ಲಿ ೨೫ ವೆಂಟಿಲೇಟರ್ ಕೂಡ ಇವೆ. ಬಿ.ಎಂ.ಆಸ್ಪತ್ರೆಯನ್ನು ಕ್ವಾರಂಟೈನ್ ಮಾಡಲು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಮೈಸೂರು

Click to comment

Trending

Exit mobile version