ಆರೋಗ್ಯ / HEALTH

ಬಡವರ ಪಾಲಿಗೆ ಯಮನಂತಾದ ಹುಬ್ಳಿ ಕಿಮ್ಸ್..

Published

on

ಹುಬ್ಬಳ್ಳಿ(ಧಾರವಾಡ): ಕೊರನಾ ಅಟ್ಟಹಾಸ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ವೃದ್ದರೊಬ್ಬರು ಗೋಳಾಡಿದ ಘಟನೆ ಕಿಮ್ಸ್ ಆಸ್ಪತ್ರೆ ಎದುರು ಕಡೆ ನಡೆದಿದೆ.
ಅಪರಿಚಿತ ವೃದ್ಧರೊಬ್ಬರು ಯಾವುದೋ ರೋಗದ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ನಿಶಕ್ತದಿಂದ ಕಿಮ್ಸ್ ಆಸ್ಪತ್ರೆ ಹೊರಗಡೆ ಬಿದ್ದಿದ್ದಾರೆ. ಆದರೆ ಇವರನ್ನು ನೋಡಿ ಕೂಡಾ ಆಸ್ಪತ್ರೆ ಸಿಬ್ಬಂದಿ ನೆರವಿಗೆ ದಾವಿಸಿಲ್ಲ. ಪರಿಣಾಮ ಮೂರು – ನಾಲ್ಕು ಗಂಟೆಯಾದರೂ ಬಿರುಬಿಸಿಲಲ್ಲಿ ಬಿದ್ದು ಗೋಳಾಡಿದ್ದಾರೆ. ಆಗ ಈ ವೃದ್ಧನ ಸ್ಥಿತಿ ನೋಡಿದ ಸ್ಥಳೀಯರು ಜ್ಯೂಸ್ ನೀಡಿ ಉಪಚಾರ ಮಾಡಿದ್ದಾರೆ.
ಇನ್ನೂ ಬಡವರ ಬಾಳಿನ ಆಶಾಕಿರಣವಾದ ಕಿಮ್ಸ್ ಆಸ್ಪತ್ರೆಯೇ ಬಡವರ ಪಾಲಿಗೆ ಯಮನಂತೆನಾದರೆ ಜನಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ, ಕೊರೊನಾ ವೈರಸ್‌ಗೆ ಚಿಕಿತ್ಸೆ ಕೊಡುವ ವೈದ್ಯರು ಉಳಿದ ರೋಗಿಗಳ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರದ್ದು ಜೀವಾ ಅಲ್ವೇ…ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಬಿಟ್ಟು ಕಿಮ್ಸ್ ಆಡಳಿತ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಕೂಡಲೇ ವೃದ್ದನಿಗೆ ಚಿಕಿತ್ಸೆ ನೀಡಿ ಅವರ ಪ್ರಾಣ ಉಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ- ಧಾರವಾಡ

Click to comment

Trending

Exit mobile version