ಆರೋಗ್ಯ / HEALTH

ತುಮಕೂರು ನಗರದ ಮೇಲೆ ನಿಗಾ, ರಸ್ತೆ ಮಾರ್ಗ ಬದಲಾವಣೆ

Published

on

ತುಮಕೂರು:ಕೋವಿಡ್–೧೯ ಕೊರೊನಾ ವೃಸ್ ಹರಡದಂತೆ ತಡೆಗಟ್ಟುವ ಸಂಬAಧ ಮುನ್ನಚರಿಕೆ ಕ್ರಮವಾಗಿ ತುಮಕೂರು ನಗರಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಟ್ಟು ಪರಿಶೀಲನೆ ಮಾಡಲಾಗುತ್ತಿದೆ.
ಸದ್ಯ ತುಮಕೂರು ನಗರಕ್ಕೆ ಬರುವ ಕೆಲವೊಂದು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು ಮತ್ತು ತುಮಕೂರು ನಗರದ ಒಳಗಡೆ ಬರುವ ವಾಹನಗಳಿಗಾಗಿ ಮಾರ್ಗಗಳನ್ನು ಬದಲಾಯಿಸಿದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.

ತುಮಕೂರು ನಗರಕ್ಕೆ ಬರುವವರು ಹೀಗೆ ಬನ್ನಿ..
೧.ಬೆಂಗಳೂರು ಕಡೆಯಿಂದ ತುಮಕೂರು ನಗರದ ಒಳಗಡೆ ಬರುವ ಎಲ್ಲಾ ವಾಹನ ಸವಾರರು ಕ್ಯಾತ್ಸಂದ್ಯ ಜಾಸ್ ಟೋಲ್ ಗೇಟ್ ನಿಂದ ಗುಬ್ಬಿ ರಿಂಗ್ ರಸ್ತೆ ಮೂಲಕವೇ ಪ್ರವೇಶಿಸಬೇಕು.
೨.ಕ್ಯಾತ್ಸಂದ್ರ ಸಿ.ಎಂ.ಬಡಾವಣೆ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಮಾಜಿ ಎಂ.ಎಲ್.ಎ ರಾಜಣ್ಣ ಮನೆಯ ಮುಂದಿನ ಸರ್ವಿಸ್ ರಸ್ತೆಯಿಂದ ಅಗ್ನಿಶಾಮಕ ಠಾಣೆ ಮೂಲಕ ಬಟವಾಡಿ ಪ್ರವೇಶಿಸಿ ತುಮಕೂರು ನಗರಕ್ಕೆ ಪ್ರವೇಶಿಸಬಹುದು.
೩.ಬೆಂಗಳೂರು ಕಡೆಯಿಂದ ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಗೆ ಹೋಗುವ ವಾಹನ ಸವಾರರು ಕ್ಯಾತ್ಸಂದ್ರ ಟೋಲ್ ಗೇಟ್ ಬಳಿಯ ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗಬೇಕಾಗಿದೆ.
೪.ಮೈಸೂರು-ಕುಣಿಗಲ್ ಕಡೆಯಿಂದ ಬರುವವರು ಕುಣಿಗಲ್ ಜಂಕ್ಷನ್ ಮೂಲಕ ತುಮಕೂರು ನಗರ ಒಳಗಡೆ ಬರಬೇಕಿದೆ.
೫.ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಯಿಂದ ತುಮಕೂರು ನಗರದ ಒಳಗಡೆ ಬರುವವರು ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ಮೂಲಕ ಬರಬೇಕಿದೆ.
೬.ಶಿರಾ-ಚಿತ್ರದುರ್ಗ-ದಾವಣಗೆರೆ ಕಡೆಗಳಿಂದ ಬರುವವರು ಲಿಂಗಾಪುರ ಅಂಡರ್-ಪಾಸ್ ಹಳೇ ಎನ್.ಹೆಚ್.೪ ರಸ್ತೆ ಮೂಲಕ ಶಿರಾಗೇಟ್‌ಗೆ ತಲುಪಬಹುದು

ತುಮಕೂರು ನಗರದಿಂದ ಹೊರಹೋಗುವವರು ಹೀಗೆ ತೆರಳಿ..
೧.ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನ ಸವಾರರು ಗುಬ್ಬಿ ರಿಂಗ್ ರಸ್ತೆ ಜಂಕ್ಷನ್-ರಿAಗ್ ರಸ್ತೆ ಮೂಲಕ ಕ್ಯಾತ್ಸಂದ್ರ ಜಾಸ್ ಟೋಲ್ ಮೂಲಕ ತೆರಳಬೇಕಿದೆ.
೨.ತುಮಕೂರು ನಗರದಿಂದ ಬೆಂಗಳೂರು ಕಡೆಗೆ ಹೋಗುವವರು ಬಟವಾಡಿ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ – ೪೮ ರಸ್ತೆ ಮೂಲಕ ಮತ್ತು ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗಬಹುದಾಗಿದೆ.
೩.ತುಮಕೂರು ನಗರದಿಂದ ಶಿರಾ ಕಡೆಗೆ ಮತ್ತು ವಸಂತನರಸಾಪುರ ಕಡೆಗೆ ಹೋಗುವವರು ಶಿರಾಗೇಟ್ ಮೂಲಕ ಶ್ರೀದೇವಿ ಮೆಡಿಕಲ್ ಕಾಲೇಜಿನ ಮುಂದಿನ ಹಳೇ ಎನ್.ಹೆಚ್.೪ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ-೪೮ ರಸ್ತೆಯಲ್ಲಿ ಹೋಗಬಹುದು
೪.ಅಂತರಸನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಕೊರಟಗೆರೆ, ಮಧುಗಿರಿ ಕಡೆಗೆ ಹೋಗುವವರು ಶಿರಾಗೇಟ್-ಅಂತರಸನಹಳ್ಳಿ ಅಂಡರ್ ಪಾಸ್ ಮೂಲಕ ಹೋಗಬಹುದಾದೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Click to comment

Trending

Exit mobile version