ಆರೋಗ್ಯ / HEALTH

ಆಲಿಕಲ್ಲು ಮಳೆಗೆ ಅನ್ನದಾತ ಕಂಗಾಲು…

Published

on

ಇಂಡಿ(ವಿಜಯಪುರ):ಸತತ ಬರಗಾಲಕ್ಕೆ ಸೋತು ಸುಣ್ಣವಾಗಿರುವ ರೈತನಿಗೆ ಆಕಾಲಿಕ ಆಲಿಕಲ್ಲು ಮಳೆ ಮತ್ತೊಂದು ದುರಂತ ತಂದಿದೆ. ಮೊದಲೇ ಕೊರೊನಾ ಲಾಕ್‌ಡೌನ್‌ನಿಂದ ರೈತರ ಬದುಕು ಬೀದಿ ಪಾಲು ಆಗುತ್ತಿದೆ.
ಇಂತಹ ಸಂದರ್ಭದಲ್ಲಿ ಆಕಾಲಿಕ ಆಲಿಕಲ್ಲು ಮಳೆ ರೈತನ ಬದುಕಿಗೆ ಕೊಳ್ಳಿ ಇಟ್ಟಂತಹ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಶ್ರೀಶೈಲ ಪೂಜಾರಿ ತೋಟದಲ್ಲಿ ನಡೆದಿದೆ.
ಸುಮಾರು ಆರು ಎಕರೆ ಜಮೀನಿನಲ್ಲಿ ೫ ಸಾವಿರ ೪ ನೂರು ಪಪ್ಪಾಯಿ ಮರಗಳು,೪ ನೂರು ನಿಂಬೆಗಿಡಗಳು,೪ ನೂರು ದಾಳಿಂಬೆ ಮರಗಳು ನೆಲ ಕಚ್ಚಿವೆ.ಸದ್ಯ ಕೂಸಿನಂತೆ ಸಾಕಿದ ಮರಗಳು ನೆಲಕಚ್ಚಿದಕ್ಕೆ ಅನ್ನದಾತನ ಬದುಕು ಕಂಗಾಲಾಗಿದೆ.
ಇನ್ನು ಬ್ಯಾಂಕ್ ಮತ್ತು ಕೈಗಡ ಸಾಲವಾಗಿ ಸರಿ ಸುಮಾರು ೧೫ಲಕ್ಷ ರೂಪಾಯಿ ಪಡೆದಿದ್ದಾನೆ.ಈಗ ರೈತ ನಂಬಿದ ಮರಗಳು ಧರೆಗೆ ಉರುಳಿ ಲಕ್ಷಾಂತರ ಮೌಲ್ಯದ ಬೆಳೆ ಮಣ್ಣು ಪಾಲಾಗಿದೆ. ಅದಕ್ಕಾಗಿ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತರ ಒತ್ತಾಯಿಸಿದ್ದಾರೆ…

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Click to comment

Trending

Exit mobile version