ಆರೋಗ್ಯ / HEALTH

ತಮಿಳುನಾಡಿನಿಂದ ಬೆಂಗಳೂರಿಗೆ ಬಂದ್ರೆ 14 ದಿನ ಕ್ವಾರೆಂಟೈನ್ ಕಡ್ಡಾಯ

Published

on

ಬೆಂಗಳೂರು: ತಮಿಳುನಾಡಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು ರಾಜ್ಯಕ್ಕೆ ಸಾವಿರಾರು ಜನ ತಮಿಳಿಗರು ಬರುತ್ತಿರುವ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾಡಳಿತದ ವತಿಯಿಂದ ಕಟ್ಟುನಿಟ್ಟಿನ ಆದೇಶ ಅನ್ವಯ ಕರ್ನಾಟಕ ಗಡಿ ಅತ್ತಿಬೆಲೆಯಲ್ಲಿ ಅಧಿಕಾರಿಗಳ ತಂಡ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕಳುಹಿಸಿ ಕೊಡಲಾಗುತ್ತಿದೆ. ತಮಿಳುನಾಡಿನಿಂದ ಬೆಂಗಳೂರು ನಗರಕ್ಕೆ ಹೋಗುವವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಭಾಗಗಳಿಗೆ ಹೋಗುವವರ ಬಳಿ ಪಾಸ್ ಇದ್ದರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಳುಹಿಸಿ ಕೊಡಲಾಗುತ್ತಿದೆ.
ಇನ್ನು ಬೆಂಗಳೂರು ನಗರಕ್ಕೆ ಹೋಗುವವರು ೧೪ದಿನ ಕ್ವಾರೆಂಟೈನ್ ನಲ್ಲಿ ಇರುವುದಕ್ಕೆ ಒಪ್ಪಿಗೆ ಸೂಚಿಸಿದ್ರೆ ಮಾತ್ರ ಅಂತವರನ್ನು ಕ್ವಾರೆಂಟೈನ್ ಮಾಡಲಾಗುತ್ತಿದ್ದು ಒಪ್ಪದೆ ಇರುವವರನ್ನು ಕರ್ನಾಟಕ ಗಡಿಭಾಗ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ತಡೆದು ಹಿಂದಕ್ಕೆ ಕಳುಹಿಸಲಾಗುತ್ತಿದೆ.
ಇನ್ನು ಕರ್ನಾಟಕ ಗಡಿ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ನೂರಕ್ಕೂ ಹೆಚ್ಚು ಜನ ಪೋಲಿಸರು, ಆರೋಗ್ಯ ಸಿಬ್ಬಂದಿ,ರೆವಿನ್ಯೂ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ತಮಿಳುನಾಡಿನಿಂದ ಬರುತ್ತಿರುವ ಎಲ್ಲಾ ವಾಹನಗಳನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿ ಆರೋಗ್ಯ ತಪಾಸಣೆ ಒಳಪಡಿಸುತ್ತಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Click to comment

Trending

Exit mobile version