ಆರೋಗ್ಯ / HEALTH

ಧಾರವಾಡ ಜಿಲ್ಲೆಯಲ್ಲಿ 9 ಹೊಸ ಕೊರೊನಾ ಕೇಸ್

Published

on

ಧಾರವಾಡ: ಗುಜರಾತಿನ ಅಹಮದಾಬಾದ್ ನಗರದಿಂದ ಜಿಲ್ಲೆಗೆ ಆಗಮಿಸಿರುವ ೦೯ ಜನರಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಗುಜರಾತಿನಿಂದ ಆಗಮಿಸಿದ ಈ ಎಲ್ಲಾ ವ್ಯಕ್ತಿಗಳನ್ನು ಜಿಲ್ಲೆಯ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ಪ್ರತ್ಯೇಕವಾಗಿ ಇರಿಸಲಾಗಿತ್ತು. ಬಂದ ಕೂಡಲೇ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸೋಂಕು ದೃಢಪಟ್ಟಿರುವದರಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಿ- ೮೭೯ (೫೫),ಪಿ-೮೮೦(೩೧),ಪಿ-೮೮೧(೨೫),ಪಿ-೮೮೨ (೭೦),ಪಿ-೮೮೩ (೨೬),ಪಿ-೮೮೪ (೧೮),ಪಿ-೮೮೫ (೧೯),ಪಿ-೮೮೬ (೨೦),ಪಿ-೮೮೭(೨೭)ಈ ಎಲ್ಲಾ ೯ ಮಂದಿ ಪುರುಷರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವದರಿಂದ ಜಿಲ್ಲೆಯಲ್ಲಿ ಇದುವರೆಗೆ ಪ್ರಕರಣಗಳ ಸಂಖ್ಯೆ ೨೧ರಷ್ಟಾಗಿವೆ. ಪ್ರಕರಣವಾಗಿದೆ. ಈಗಾಗಲೇ ೭ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಡ

Click to comment

Trending

Exit mobile version