ಆರೋಗ್ಯ / HEALTH

ಅತಿ ಸೂಕ್ಷ್ಮಪ್ರದೇಶ ಪಾದರಾಯನಪುರದಲ್ಲಿ ಮತ್ತೆ ಹೈಅಲರ್ಟ್..

Published

on

ಬೆಂಗಳೂರು: ಕೊರೊನಾ ಸೋಂಕಿತರು ಹೆಚ್ಚಾಗಿ ಕಂಡು ಬಂದಿರುವ ಬೆಂಗಳೂರಿನ ಪಾದರಾಯನಪುರ ಅತಿಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದ್ದು,ಈ ಪ್ರದೇಶದಲ್ಲಿ ರಾಜ್ಯ ಸರ್ಕಾರ ಅದರಲ್ಲೂ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ.
ಅಂದ ಹಾಗೇ ಪಾದರಯನಪುರದಲ್ಲಿ ಮೊಕ್ಕಂ ಹೂಡಿರುವ ಪೊಲೀಸರು, ಬಿಬಿಎಂಪಿ, ಆರೋಗ್ಯಧಿಕಾರಿಗಳು ಹಾಗೂ ಸ್ವ್ಕಾಡ್ ಟೀಂ ಒಂದು ಕಡೆಯಿಂದ ಆರೋಗ್ಯ ಪರೀಕ್ಷೆ ನಡೆಸಲು ಮುಂದಾಗಿದೆ.
ಈ ವೇಳೆ ಯಾವುದೇ ತೊಂದರೆಯಾಗಬಾರದೆAಬ ಕಾರಣಕ್ಕೆ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳ ಸಹಾಯಕ್ಕೆ ಪೊಲೀಸರು ಬೆನ್ನೆಲುಬಾಗಿ ನಿಂತಿದ್ದಾರೆ.
ಈಗಾಗಲೇ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಪಾದರಾಯನಪುರದ ಪ್ರವೇಶ ಕೊಡುವ ಪ್ರದೇಶ ಹಾಗೂ ಗಲ್ಲಿ ಗಲ್ಲಿಯ ರಸ್ತೆಗಳನ್ನ ಸೀಲ್‌ಡೌನ್ ಮಾಡಿದ್ದಾರೆ. ಪಾದರಾಯನಪುರದಲ್ಲಿ ಯಾವುದೇ ತೊಂದರೆಯಾಗಬಾರದೆAದು ಸದ್ಯ ಅತೀ ಹೆಚ್ಚು ಸೂಕ್ಷ ಪ್ರದೇಶವಾಗಿ ಪರಿಗಣಿಸಿ ಸ್ಥಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮತ್ತೊಂದೆಡೆ ಪಾದರಾಯನಪುರದ ಜನ ದಿನ ಬಳಕೆಗೆ ಬೇಕಾದ ಅಗತ್ಯ ಸಾಮಾಗ್ರಿಗಳು, ಓಡಾಟ ಮಾಡಲು ಸಾಧ್ಯವಾಗದೇ ಕಾಂಪೌಡ್ ಹಾರಿ ಇಡೀ ಬೆಂಗಳೂರನ್ನೇ ಸುತ್ತಾಡಿ ಬರುತ್ತಿದ್ದಾರೆ.ಹೀಗಾಗಿ ಪೊಲೀಸರು ಇದರ ಕುರಿತು ಒಂದು ತಂಡ ರಚನೆ ಮಾಡಿ ತನಿಖೆ ಮುಂದುವರೆಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version