ಆರೋಗ್ಯ / HEALTH

ಆರ್‌ಟಿಇ ಶುಲ್ಕ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ..

Published

on

ನಂಜನಗೂಡು(ಮೈಸೂರು): ಎಲ್ಲಾ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಇರುವ ಆರ್‌ಟಿಇ ಶುಲ್ಕವನ್ನು ಸರ್ಕಾರ ಕೂಡಲೇ ಪಾವತಿಸುವಂತೆ ನಂಜನಗೂಡು ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ
ಇಂದು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಂಜನಗೂಡು ತಾಲೂಕಿನಲ್ಲಿ ಒಟ್ಟು ೪೨ಅನುದಾನ ರಹಿತ ಶಾಲೆಗಳಿದ್ದು,ಅವುಗಳಲ್ಲಿ ಸುಮಾರು ೬೦೦ ರಿಂದ೭೦೦ ವಿದ್ಯಾರ್ಥಿಗಳು ಆರ್‌ಟಿಇ ಯೋಜನೆ ಯಡಿ ಶಿಕ್ಷಣ ಪಡೆಯುತ್ತಿದ್ದಾರೆ.ಆದರೆ ಸರ್ಕಾರ ಆರ್ಟಿಇ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ನೀಡದೆ ಬಾಕಿ ಉಳಿಸಿಕೊಂಡಿದೆ.
ಜೊತೆಗೆ ಲಾಕ್ ಡೌನ್ ಅಂತಹ ಸಂದಿಗ್ಧ ಪರಿಸ್ಥಿತಿಯಿಂದ ಮಾರ್ಚ್ ೧೦ರಿಂದಲೇ ಶಾಲೆಗಳು ಬಂದ್ ಆಗಿರುವುದರಿಂದ ಶಾಲೆಯ ಎಲ್ಲ ಚಟುವಟಿಕೆಗಳು ನಿಂತು ಆರ್ಥಿಕ ಮುಗ್ಗಟ್ಟಿನಿಂದ ತೊಂದರೆಯಾಗಿದೆ.ಅಲ್ಲದೆ ಎಲ್ಲ ಶಾಲೆಗಳಿಂದ ಶಿಕ್ಷಕರು ಸೇರಿದಂತೆ ಸುಮಾರು ೨,೦೦೦ ನೌಕರ ವರ್ಗದವರು ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಸಂಬಳವನ್ನು ನೀಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ಹೀಗಾಗಿ ಸಿಎಂ ಹಾಗೂ ಶಿಕ್ಷಣ ಸಚಿವರು ಸಂಕಷ್ಟದಲ್ಲಿರುವ ನಮ್ಮ ಅನುದಾನರಹಿತ ಶಾಲೆಗಳಿಗೆ ಬಾಕಿ ಇರುವ ಆರ್‌ಟಿಇ ಹಣವನ್ನು ಕೂಡಲೇ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಜೊತೆಗೆ ಆರ್‌ಟಿಇ ಶುಲ್ಕವನ್ನು ಕಡಿಮೆ ನೀಡುತ್ತಿದ್ದು,ಅದನ್ನು ಸರಿಯಾದ ಸಮಯಕ್ಕೆ ನೀಡದೇ ಇರುವುದರಿಂದ ಹಣಕಾಸು ತೊಂದರೆ ಜೊತೆಗೆ ಶಿಕ್ಷಕರಿಗೆ ಸಂಬಳ ನೀಡುವುದು ಕೂಡ ದೊಡ್ಡ ಸವಾಲಾಗಿದೆ.ಹಾಗಾಗಿ ಸರ್ಕಾರ ಕೂಡಲೇ ನಮ್ಮ ಅನುದಾನರಹಿತ ಶಾಲೆಗಳಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.ಆರ್‌ಟಿಇ ಶುಲ್ಕ ಪಾವತಿಸಬೇಕು ಮತ್ತು ಬ್ಯಾಂಕುಗಳಲ್ಲಿ ನಮಗೆ ಜಾಮೀನುರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ನಟರಾಜ್ ಉಪಾಧ್ಯಕ್ಷರುಗಳಾದ ಚೆಲುವಪ್ಪ ಶರ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Click to comment

Trending

Exit mobile version