ಆರೋಗ್ಯ / HEALTH

ಹುಬ್ಬಳ್ಳಿ ಗ್ರಾಮೀಣ, ನಗರ, ಉಪನಗರದಲ್ಲಿ ಬಸ್ ಸಂಚಾರ ಆರಂಭ

Published

on

ಹುಬ್ಬಳ್ಳಿ :ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾಗಿದ್ದು,ಕೇಂದ್ರ ಸರ್ಕಾರ ಕೊಂಚ ಸಡಿಲಿಕೆಯನ್ನು ಮಾಡಿದೆ.
ಅಲ್ಲದೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬಸ್ ಸಂಚಾರಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದು,ಹುಬ್ಬಳ್ಳಿ ಗ್ರಾಮೀಣ,ಹುಬ್ಬಳ್ಳಿ ನಗರ ಹಾಗೂ ಹುಬ್ಬಳ್ಳಿ ಉಪನಗರಗಳಲ್ಲಿ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚಾರ ಪ್ರಾರಂಭವಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ಘಟಕದಿಂದ ಸುಮಾರು ೪೬೨ ಬಸ್ಸುಗಳಲ್ಲಿ ಸದ್ಯ ೪೧೯ ಮಾರ್ಗದಲ್ಲಿ ಸಂಚರಿಸಲು ಸಕಲ ಸಿದ್ದತೆಗಳನ್ನು ಮಾಡಲಾಗಿದ್ದು,ಈಗಾಗಲೇ ನಗರ ಸಾರಿಗೆ ಬಸ್ ಸಾರಿಗೆ ಬಸ್ ಗಳು ಸಿಬಿಟಿ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿವೆ.
ಇನ್ನು ಗ್ರಾಮೀಣ ಸಾರಿಗೆ ಬಸ್ ಗಳು ಹಳೇ ಬಸ್ ನಿಲ್ದಾಣ ಹಾಗೂ ದೂರದ ಬೆಂಗಳೂರು, ಬೆಳಗಾವಿ, ಸೇರಿದಂತೆ ಅನ್ಯ ಜಿಲ್ಲೆಗಳಿಗೆ ತೆರಳುವ ಬಸ್‌ಗಳು ಹೊಸ ಬಸ್ ನಿಲ್ದಾಣದಿಂದ ಸಂಚರಿಸುತ್ತಿವೆ.
ಕಳೆದ ಎರಡು ತಿಂಗಳಿAದ ಸ್ಥಗಿತಗೊಂಡಿದ್ದ ಬಸ್‌ಗಳು ಆರಂಭಗೊಳುತ್ತಿದ್ದAತೆ ತಮ್ಮ ತಮ್ಮ ಊರುಗಳುಗೆ ತೆರಳಲು ಸಾರ್ವಜನಿಕರು ಆಗಮಿಸಿದ್ದಾರೆ.ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ.ಸ್ಯಾನಿಟೈಸರ್ ಹಾಗೂ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಆದರೆ ಅವಳಿ ನಗರದ ಮಧ್ಯೆ ಸಂಚರಿಸುವ ಬಿಆರ್‌ಟಿಎಸ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿಲ್ಲ.ಹೀಗಾಗಿ ಬಿಆರ್‌ಟಿಎಸ್ ಹೊರತು ಪಡಿಸಿ ಹುಬ್ಬಳ್ಳಿಯ ನಗರ, ಉಪನಗರ ಬಸ್ ಸಂಚಾರ ಕೂಡ ಪ್ರಾರಂಭಗೊAಡಿದ್ದು,ಜನರಿAದ ಉತ್ರಮ ಸ್ಪಂದನೆ ಸಿಕ್ಕಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version