ಆರೋಗ್ಯ / HEALTH

ಪತ್ರಕರ್ತರಿಗೆ ಆಯುರ್ವೇದ ಔಷಧ ಕಿಟ್ ವಿತರಣೆ..

Published

on

ತಿಪಟೂರು(ತುಮಕೂರು): ಇಲ್ಲಿನ ಆಯುಷ್ ಇಲಾಖೆಯ ವತಿಯಿಂದ ಸರಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ತಾಲೂಕಿನ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರಿಗೆ ಆಯುರ್ವೇದ ಔಷಧಿ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆ ಕಾರ್ಯಕ್ರಮದಲ್ಲಿ ತಾಲ್ಲೂಕು ಆಯುರ್ವೇದಿಕ್ ವೈದ್ಯಾಧಿಕಾರಿ ಉದಯ್ ಕುಮಾರ್ ಜೋಶಿ,ಪ್ರತಿ ನೂರು ವರ್ಷಗಳಿಗೆ ಒಮ್ಮೆ ಒಂದಲ್ಲಾ ಒಂದು ರೀತಿಯಲ್ಲಿ ಜೀವಿಗಳ ಮೇಲೆ ವೈರಸ್‌ಗಳು ದಾಳಿ ಮಾಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ತಿಳಿಸಿದರು.
ಸಾಮಾಜಿಕ ಅಂತರ ಕಾಪಾಡಿಕೊಂಡು ನಮ್ಮ ಹಿಂದಿನ ಪೂರ್ವಜರ ಆಚಾರ ವಿಚಾರದ ಜೋತೆಗೆ ಭಾರತೀಯ ಸಂಸ್ಕೃತಿಯನ್ನು ರೂಢಿಸಿಕೊಂಡು ಆರೋಗ್ಯವಂತರಾಗೊಣ, ಇಂದು ಮಾಧ್ಯಮ ಮಿತ್ರರು ಎಲ್ಲಾ ಸಂದರ್ಭಗಳಲ್ಲಿ ಸುದ್ದಿ ಮಾಡುವ ಸಲುವಾಗಿ ಅರೋಗ್ಯವನ್ನು ಲೆಕ್ಕಿಸದೆ ಎಲ್ಲಾ ಕಡೆ ಹೋಗಿ ಸುದ್ದಿ ಮಾಡಬೇಕಾಗುತ್ತದೆ.ಅದಕ್ಕಾಗಿ ತಮ್ಮಗಳ ಸೇವೆಯ ಸಲುವಾಗಿ ಆಯುರ್ವೇದ ಕಿಟ್ ವಿತರಣೆ ಮಾಡಲಾಗುತ್ತದೆ ಎಂದರು.
ಯೋಗ ,ಧ್ಯಾನಕ್ಕೆ ಹೆಚ್ಚು ಒತ್ತು ನೀಡಬೇಕು ಮತ್ತು ಪರಿಶುದ್ಧ ಆಹಾರ ಗಾಳಿ ನೀರು ಸೇವನೆಯ ಜೊತೆಗೆ ಮೆಣಸು ಶುಂಠಿಯAತಹ ಕಷಾಯ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಕರೋನಾ ವನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಉದಯ್ ಕುಮಾರ್ ಜೋಷಿ, ಡಾ. ಕಾಮ್ ರಾಜ್ ಡಾ. ಜನಾರ್ಧನ್ ಡಾ, ಸುಮನ
ಡಾ. ಹೇಮರಾಜು ಮತ್ತು ತಾಲ್ಲೂಕಿನ ಎಲ್ಲಾ ಪತ್ರಕರ್ತರು ಮಿತ್ರರು ಭಾಗವಹಿಸಿದ್ದರು.

ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Click to comment

Trending

Exit mobile version