ಆರೋಗ್ಯ / HEALTH

ರಾಯಚೂರಿನಲ್ಲಿ ಇಂದು ಮತ್ತೆ ೪ ಕೊರೊನಾ ಕೇಸ್

Published

on

ರಾಯಚೂರು: ಮುಂಬೈ ವಲಸಿಗರು ರಾಯಚೂರಿಗೆ ಬಂದದ್ದೆ ತಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು,ಇಂದು ಮತ್ತೆ ೪ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.
ಹೌದು,ರಾಯಚೂರು ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನರಿಗೆ ೫ ಗಂಟೆ ಹೆಲ್ತ್ ಬುಲೆಟಿನ್ ಬೆರಗಾಗುವಂತೆ ಮಾಡಿದೆ.
ಮಹಾರಾಷ್ಟ್ರದ ಮುಂಬೈ ನಿಂದ ಬಂದಿದ್ದ ನಾಲ್ಕು ಜನ ಮಹಿಳೆಯರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೧ ಕ್ಕೆ ಏರಿದಂತಾಗಿದೆ.
ಇದೀಗ ಹೊಸದಾಗಿ ಪತ್ತೆಯಾಗಿರುವ ನಾಲ್ಕು ಜನ ಮಹಿಳೆಯರು ರಾಯಚೂರು ತಾಲ್ಲೂಕಿನವರಾಗಿದ್ದಾರೆ.ಇದರಿಂದ ತಾಲ್ಲೂಕಿನ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.ಸೋಂಕಿತರನ್ನು ಈಗಾಗಲೇ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಸೋಕು ಹಬ್ಬಿದವರಲ್ಲಿ ರಾಯಚೂರು ನಗರದ ಮೂರು ಮಹಿಳೆಯರು ಮತ್ತ ಗ್ರಾಮೀಣ ಭಾಗದ ವಡ್ಲೂರು ಗ್ರಾಮದ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಎ.ವೆಂಕಟೇಶ ಕುಮಾರ್ ತಿಳಿಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ರಾಯಚೂರು

Click to comment

Trending

Exit mobile version