ಆರೋಗ್ಯ / HEALTH

ಕುಗ್ರಾಮವಾದ ದೇವದುರ್ಗ ತಾಲೂಕಿನ ಚಡಕಲಗುಡ್ಡ..

Published

on

ದೇವದುರ್ಗ(ರಾಯಚೂರು): ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯ ಗಲಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಡಕಲಗುಡ್ಡ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಎನ್‌ಆರ್‌ಇಜಿ ಕೆಲಸ ಕಾರ್ಯಗಳು ಮರಿಚಿಕೆಯಾಗಿವೆ
ಸದ್ಯ ಈ ಗ್ರಾಮದಲ್ಲಿ ಸುಮಾರು ೩೦೦ ಹೆಚ್ಚು ಕುಟುಂಬಗಳ ಎರಡು ಸಾವಿರಕ್ಕೂ ಜನರು ವಾಸ ಮಾಡುತಿದ್ದಾರೆ.ಆದರೆ ಈ ಗ್ರಾಮದ ಜನತೆಗೆ ಬೇಕಾದ ಆಗತ್ಯ ಮೂಲಭೂತ ಸೌಕರ್ಯಗಳು ಇಲ್ಲವಾಗಿವೆ.
ಅಲ್ಲದೆ, ಕುಡಿಯುವ ನೀರಿನ ಸಮಸ್ಯೆ, ಸಮರ್ಪಕ ವಿದ್ಯುತ್ ಪೂರೈಕೆ, ಸೂಕ್ತ ಚರಂಡಿ,ರಸ್ತೆ, ಉದ್ಯೋಗ ಖಾತ್ರಿಯ ಕೆಲಸ ಇಂತಹ ಹಲವು ಸಮಸ್ಯೆಗಳಿಂದ ಈ ಗ್ರಾಮದ ಜನ ಬಳಲುತ್ತಿದ್ದಾರೆ.
ಇನ್ನು ಗ್ರಾಮದ ಹೊರ ಭಾಗದಲ್ಲಿ ಕಸನದೊಡ್ಡಿಗೆ ಹೋಗುವ ದಾರಿಯಲ್ಲಿ ಇರುವ ಎರಡು ಬೊರವೇಲ್ ಕೆಟ್ಟು ಹೋಗಿದೆ.
ಜೊತೆಗೆ ಸಮರ್ಪಕ ಚರಂಡಿ ಇಲ್ಲದ ಪರಿಣಾಮ ಅದೇ ರಸ್ತೆಯಲ್ಲೇ ಆ ಚರಂಡಿ ನೀರು ಹರಿದು ಜನತೆಗೆ ಓಡಾಡಲು ತೊಂದರೆಯಾಗಿದೆ. ಇದಲ್ಲದೆ,ಅದೇ ಮಾರ್ಗದಲ್ಲಿ ಇರುವ ದನಗಳ ಕುಡಿಯುವ ನೀರಿಗಾಗಿ ಇರುವ ತೊಟ್ಟಿ ಉಪಯೋಗಕ್ಕೆ ಇಲ್ಲದಾಗಿದೆ.ಈ ರೀತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಗ್ರಾಮದ ಜನತೆ ಎದುರಿಸುತ್ತಿದ್ದಾರೆ.
ಇನ್ನು ಒಂದೆಡೆ ಲಾಕ್ ಡೌನ್ ಸಂಕಷ್ಟದ ಮತ್ತು ಇನ್ನೊಂದೆಡೆ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಜನರಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸಿಲುಕಿ ಗಂಭೀರವಾದ ಪರಿಸ್ಥಿತಿಯಲ್ಲಿ ಮೂಕ ಪ್ರಾಣಿಗಳಂತೆ ನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ.
ಈ ಕೂಡಲೇ ತಾವು ಎಚ್ಚೆತ್ತುಕೊಂಡು ಆಗತ್ಯ ಬೇಡಿಕೆಗಳಾದ ಕುಡಿಯುವ ನೀರು, ಬೋರ್‌ವೆಲ್ ರಿಪೇರಿ, ದನಗಳಿಗೆ ನಿರ್ಮಸಿರುವ ಕುಡಿಯುವ ನೀರಿನ ತೊಟ್ಟಿಯ ಸರಿಯಾದ ನಿರ್ವಹಣೆ, ಚರಂಡಿಯ ಸ್ವಚ್ಚತೆ, ಸಮರ್ಪಕವಾದ ವಿದ್ಯುತ್ ಪೂರೈಕೆ, ರಸ್ತೆ ಸೇರಿ ಇತರ ಆಗತ್ಯ ನಾಗರಿಕ ಸೌಕರ್ಯಗಳನ್ನು ನೀಡಬೇಕು.ಒಂದು ವೇಳೆ ವಾರದೊಳಗೆ ಸಮಸ್ಯೆಗಳು ಬಗೆಹರಿಸದೆ ನಿರ್ಲಕ್ಷ್ಯ ತೋರಿದಲ್ಲಿ ಗ್ರಾಮದ ಜನರೊಂದಿಗೆ ಜೊತೆಗೂಡಿ ಕರ್ನಾಟಕ ಪ್ರಾಂತ್ಯ ರೈತ ಸಂಘ,ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ ಸಂಘಟನೆಯ ವತಿಯಿಂದ ಹೋರಾಟ ಮಾಡಲಾಗುವುದೆಂದು ಹಲವು ಮುಖಂಡರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Click to comment

Trending

Exit mobile version