ಜನಸ್ಪಂದನ

ಹುಲ್ಲಹಳ್ಳಿಯ ಮಹಿಳಾ ಪಿಡಿಓ-ಅಧ್ಯಕ್ಷನ ಖತರ್ನಾಕ್ ಕಳ್ಳಾಟ..

Published

on

ನಂಜನಗೂಡು(ಮೈಸೂರು):ಈ ಗ್ರಾಮ ಪಂಚಾಯಿತಿ ಮಹಿಳಾ ಪಿಡಿಓ ಝಣ..ಝಣ..ಕಾಂಚಾಣಕ್ಕೆ ಮರುಳಾಗಿ ಲಕ್ಷಗಟ್ಟಲೇ ಬೆಲೆ ಬಾಳುವ ಗ್ರಾಮ ಠಾಣಾ ಸರ್ಕಾರಿ ನಿವೇಶನಗಳನ್ನು ಅಕ್ರಮ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ.
ಸ್ವತಃ ಅದೇ ಪಂಚಾಯ್ತಿಯ ಸದಸ್ಯರಿಂದಲೇ ಪಿಡಿಓ ಭ್ರಷ್ಟಾಚಾರ ಬಯಲಿಗೆ ಬಂದಿದ್ದು,ಇದೀಗ ಪಿಡಿಓ ಕಳ್ಳಾಟ ಬಯಲಾಗಿದೆ.
ಅಂದ ಹಾಗೇ ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಮಹಿಳಾ ಪಿಡಿಓ ಖತರ್ನಾಕ್ ಕಳ್ಳಾಟ ಆಡಿದ್ದು,ಭಾರೀ ಭಷ್ಟಾಚಾರ ನಡೆಸಿದ್ದಾರೆ ಎಂದು ಗ್ರಾಮ ಪಂಚಾಯಿತಿಯ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಗ್ರಾಮಪಂಚಾಯಿತಿ ಸದಸ್ಯರ ಗಮನಕ್ಕೂ ತರದೇ ಸಭೆಯಲ್ಲಿ ತಂದ ರೀತಿ ಸಭಾ ನಡಾವಳಿ ಮಾಡಿ ತಾಲೂಕು ಪಂಚಾಯಿತಿ ಯಲ್ಲಿಯೂ ಕೂಡ ರಾಜಕೀಯ ಪ್ರಭಾವದಿಂದ ಅಕ್ರಮವಾಗಿ ಸರ್ಕಾರಿ ನಿವೇಶನಗಳನ್ನು ಮಂಜೂರು ಮಾಡಿಸುವಲ್ಲಿ ಇವರಿಬ್ಬರು ಯಶಸ್ವಿಯಾಗಿದ್ದಾರೆ ಎಂದು ದೂರಿದ್ದಾರೆ.
ಅಲ್ಲದೆ, ನೀರಾವರಿ ಇಲಾಖೆಯಲ್ಲಿ ಸರಕಾರಿ ನೌಕರನಾಗಿ ಕೆಲಸ ಮಾಡುವ ಗೀತಾ(ಕೋಂ ಶಿವಣ್ಣ) ಹಾಗೂ ರಾಜಸ್ಥಾನ ಮೂಲದ ಪ್ರೇಮ್ ಸಿಂಗ್(ಬೀನ್ ಜಯಸಿಂಗ್)ಎAಬ ಇಬ್ಬರು ವ್ಯಕ್ತಿಗಳಿಗೆ ಬೆಲೆ ಬಾಳುವ ೩೦-೪೦ ಅಳತೆಯ ೨ ಸರ್ಕಾರಿ ನಿವೇಶನಗಳನ್ನು ಅಕ್ರಮ ಮಂಜೂರಿಗಾಗಿ ಕಸರತ್ತು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಗೀತಾ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿರುವ ಸದಸ್ಯರು ಗ್ರಾಮಪಂಚಾಯ್ತಿಯಲ್ಲಿ ೧೪ನೇ ಹಣಕಾಸು ನಿಧಿ-೨ ಸೇರಿದಂತೆ ಸರ್ಕಾರದಿಂದ ಬರುವ ಅನುದಾನಗಳು ಮತ್ತು ಡಿ.ಸಿ ಬಿಲ್‌ಗಳಲ್ಲೂ ಲಕ್ಷಾಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಅಕ್ರಮದ ವಿರುದ್ಧ ತನಿಖೆ ಮಾಡಿ ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳಿ ಜಿಲ್ಲಾ ಮತ್ತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅವರು ಮಾತ್ರ ನಮ್ಮ ಮನವಿಗೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಸರ್ಕಾರಿ ಗ್ರಾಮ ಠಾಣಾ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿರುವ ಪಿಡಿಓ ಮತ್ತು ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Click to comment

Trending

Exit mobile version