ಆರೋಗ್ಯ / HEALTH

ಹಸಿವಿನ ಹಂಬಲಕ್ಕೆ ಆಹಾರ ಪದಾರ್ಥಗಳ ಸಹಕಾರ..

Published

on

ನಾಗಮಂಗಲ(ಮ0ಡ್ಯ): ಹಸಿವಿನ ಬವಣೆ ಎದುರಿಸುತ್ತಿರುವ ಕುಟುಂಬಗಳಿಗೆ ಮಾಡುವ ಅಹಾರ ಪದಾರ್ಥಗಳ ಸಹಕಾರ ಪರಮಶ್ರೇಷ್ಠ ದಾನ ಎಂದು ನಾಗಮಂಗಲ ತಹಸೀಲ್ದಾರ್ ಕುಂಞ ಅಹಮ್ಮದ್ ತಿಳಿಸಿದ್ದಾರೆ.
ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ನಾಗಮಂಗಲ ತಾಲ್ಲೂಕು ಘಟಕದಿಂದ ಕಡುಬಡ ಕುಟುಂಬಗಳಿಗೆ ಉಚಿತ ಆಹಾರ ಪದಾರ್ಥಗಳ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ತುತ್ತು ಅನ್ನ ಮತ್ತು ಗೇಣು ಬಟ್ಟೆಯ ಮೇಲೆ ಅವಲಂಬಿತವಾಗಿರುವ ಮನುಷ್ಯನ ಜೀವನ ನಶ್ವರ. ಈ ಮಧ್ಯೆ ಸಂಭವಿಸುವ ಇಂತಹ ಕಷ್ಟದ ಸನ್ನಿವೇಶದ ಸಹಕಾರ ಅತ್ಯಂತ ಮೌಲ್ಯಾಧಾರಿತ ಶ್ಲಾಘನೀಯ ವಿಷಯ.ಗ್ರಾಮಗಳ ಅಭಿವೃದ್ದಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು
ಈ ಸಂಸ್ಥೆಯ ಮೂಲಕ ಶ್ರೀ ಕ್ಷೇತ್ರ ರೂಪಿಸುತ್ತಿದೆ. ಪಕ್ಷಾತೀತ ಮತ್ತು ಜಾತ್ಯಾತೀತ ಧೋರಣೆಯೊಂದಿಗೆ ದುರ್ಬಲರ ಸಬಲೀಕರಣಕ್ಕಾಗಿ ತೊಟ್ಟಿರುವ ಶ್ರೀ ಕ್ಷೇತ್ರದ ಸಂಕಲ್ಪ ಪ್ರಾತಃ ಸ್ಮರಣೀಯ ಎಂದರು.
ಈ ವೇಳೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ಹಾಗೂ ಕಾರ್ಯಕ್ರಮ ಆಯೋಜಿತ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಹೇಮಲತಾ ಹೆಗ್ಗಡೆ,ಸಂಸ್ಥೆಯ ಸಿಬ್ಬಂದಿಗಳಾದ ಮಧು, ಯಶೋಧ ಹಾಗೂ ಉಪಾರಹಳ್ಳಿ ಹೇಮಲತಾಉಪಸ್ಥಿತರಿದ್ದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Click to comment

Trending

Exit mobile version