ಆರೋಗ್ಯ / HEALTH

ಜಾಸ್ತಿ ಮಾತಾಡಿದ್ರೆ ಕೆಲಸದಿಂದ ಕಿತ್ತೊಗೆಯುವ ಬೆದರಿಕೆ ಹಾಕ್ತಾರೆ.. ಏನ್ಮಾಡೋದು ಹೇಳಿ..

Published

on

ಶಹಾಪುರ(ಯಾದಗಿರಿ):ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಿ ನಮಗೆ ಸೂಕ್ತ ಭದ್ರತೆ ಒದಗಿಸಬೇಕು,ಇಲ್ಲದಿದ್ದರೆ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಎಮೋಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು,ಕಳೆದ ಹತ್ತಾರು ವರ್ಷಗಳಿಂದ ನಾವು ಕೂಡ ಸಾಮಾಜಿಕ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ.ಆದರೆ ನಮಗೆ ಯಾವುದೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರಿಗೆ ನೀಡಿರುವ ಎಲ್ಲ ಸೌಲಭ್ಯಗಳು ನಮಗೂ ನೀಡಿಬೇಕು ಆರ್ಥಿಕತೆಯ ಜೊತೆಗೆ ಸೇವಾ ಭದ್ರತೆ ನೀಡಿ ಬೋನಸ್ ಹೆಚ್ಚಳ ಸೇರಿದಂತೆ ಹುದ್ದೆಗಳನ್ನು ಖಾಯಂಗೊಳಿಸುವAತೆ ಆಗ್ರಹಿಸಿದರು.
ಈಗಾಗಲೇ ವಿಭಾಗ ಮಟ್ಟದಲ್ಲಿ ಸಮಿತಿ ರಚಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೆಲವು ದಿನಗಳ ಹಿಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರಸವೆ ನೀಡಿದ್ದರು.ಆದರೂ ಇನ್ನೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿಗಳಿಗೆ ಕಳೆದೆರಡು ತಿಂಗಳಿAದ ವೇತನ ಕೂಡ ನೀಡದೆ ತಡೆಹಿಡಿಯಲಾಗಿದೆ.ಇದು ಯಾವ ನ್ಯಾಯ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ನಮ್ಮ ಬೇಡಿಕೆಗಳ ಪ್ರಸ್ತಾವನೆಯನ್ನು ಮೇಲಾಧಿಕಾರಿ ಗಮನಕ್ಕೆ ಸಲ್ಲಿಸದೇ ಬೇಜವಾಬ್ದಾರಿತನದಿಂದ ಸ್ಥಳೀಯ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಹೀಗಾಗಿ ನಾವು ಮಾನಸಿಕವಾಗಿ ನೊಂದಿದ್ದೇವೆ.ಜಾಸ್ತಿ ಮಾತನಾಡಿದರೆ ಕೆಲಸದಿಂದ ಕಿತ್ತೊಗೆಯುವ ಬೆದರಿಕೆ ಕೂಡ ಹಾಕುತ್ತಿದ್ದಾರೆ. ಆದ್ದರಿಂದ ಕುಟುಂಬದ ನಿರ್ವಹಣೆ ಮಾಡುವುದು ಬಲು ಕಷ್ಟಕರವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ರಾಚನಗೌಡ, ಡಾ.ವಿ.ಎಂ.ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.

ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ(ಯಾದಗಿರಿ)

Click to comment

Trending

Exit mobile version