ಆನೇಕಲ್(ಬೆ0.ನಗರ):ಬೆ0ಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಮಹಿಳೆಯೊಬ್ಬರಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ.
ಅಂದ ಹಾಗೇ ಆನೇಕಲ್ ಪಟ್ಟಣದ ಚರ್ಚ್ ರಸ್ತೆ ಬಳಿ ಈ ಮಹಿಳೆ ವಾಸವಿದ್ದು, ನಿನ್ನೆ ಇದ್ದಕ್ಕಿದ್ದಂತೆ ವಾಂತಿ, ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಇನ್ನು ಈ ಮಹಿಳೆ ಲಾಕ್ ಡೌನ್ ಆದ ಬಳಿಕ ಎಲ್ಲಿಯೂ ಓಡಾಡಿಲ್ಲ..ಆದ್ರು ಸಹ ಕೊರೊನಾ ಶಂಕೆ ಏಕೆ?ಎಂಬ ಪ್ರಶ್ನೆ ಅಧಿಕಾರಿಗಳನ್ನ ಕಾಡುತ್ತಿದೆ.ಜೊತೆಗೆ ಈಗ ಮಹಿಳೆಯ ಟ್ರಾವೆಲ್ ಹಿಸ್ಟರಿ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಆನೇಕಲ್ ಪಟ್ಟಣದ ಜನತೆ ಕೊರೊನಾ ಆತಂಕದಲ್ಲಿದ್ದಾರೆ.
ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)