ಆರೋಗ್ಯ / HEALTH

ಆ್ಯಪಲ್..ಆ್ಯಪಲ್..ಶಿರಾ ಆ್ಯಪಲ್..ಕರ್ನಾಟಕದಲ್ಲೂ ಸೇಬು ಬೆಳೆ ಆರಂಭ..

Published

on

ಶಿರಾ(ತುಮಕೂರು):ಕೆಲ ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಸೇಬು ಹಣ್ಣು ಬೆಳೆಯುವುದನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ.
ಆದರೆ ಕೆಲಸದ ಮೇಲೆ ಬದ್ಧತೆ ಇರುವ ಕೆಲವು ರೈತರು, ಹಿಮಾಲಯ ಪರ್ವತ ಪ್ರದೇಶದ ತಪ್ಪಲಿನಲ್ಲಿ ಬೆಳೆಯುವ ಸೇಬು ಹಣ್ಣನ್ನು
ನಮ್ಮ ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಒಜ್ಜುಕುಂಟೆ ಗ್ರಾಮದಲ್ಲೂ ಕೂಡ ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದಾರೆ.
ಹೌದು, ಶಿರಾ ನಗರದ ಮದೀನ ಎಲೆಕ್ಟ್ರಿಕಲ್ ಕೆಲಸಗಾರ ಎಂ.ಡಿ ಫಯಾಜ್ ಸೇಬು ಹಣ್ಣು ಬೆಳೆದು ಸುದ್ದಿಯಾಗಿದ್ದಾರೆ.
ಈ ಮೂಲಕ ಹೇಳಿ ಕೇಳಿ ಬರಪೀಡಿತ ತಾಲೂಕಾಗಿರುವ ಶಿರಾದಲ್ಲಿ ಸೇಬು ಬೆಳೆಯಬಹುದೇ ಎಂಬ ಹಲವರ ಸೋಜಿಗದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಅಂದ ಹಾಗೇ ಎಂ.ಡಿ ಫಯಾಜ್ ರಾಜ್ಯದ ವಿವಿಧ ಭಾಗದಲ್ಲಿ ಕೃಷಿ ಬಗ್ಗೆ ಹಲವಾರು ಮಾಹಿತಿ ಪಡೆದಿದ್ರು..ನಂತ್ರ ಮನೆಯಲ್ಲಿಡುವ ಪಾಟ್‌ಗಳಲ್ಲಿ ಸೇಬು ಹಣ್ಣನ್ನು ಬೆಳೆಯುವ ಸುದ್ದಿ ಕೂಡ ಕೇಳಿದ್ರು.. ಇದಾದ ಬಳಿಕ ತಾನು ಏಕೆ ಬೆಳೆಯ ಬಾರದು ಎಂಬ ನಿರ್ಧಾರಕ್ಕೆ ಬಂದ ಅವ್ರು ಇದೀಗ ಸೇಬು ಬೆಳೆದೇ ಬಿಟ್ಟಿದ್ದಾರೆ.
ಇನ್ನು ದಾಳಿಂಬೆಯಿAದ ನಷ್ಟ ಅನುಭವಿಸಿದ ಫಯಾಜ್ ಕಳೆದ ೨೦೧೯ರ ಜನವರಿಯಲ್ಲಿ ಒರಿಸ್ಸಾ ಮೂಲದವರಿಂದ ಸುಮಾರು ೨೫೦ ಗಿಡಗಳನ್ನು ಖರೀದಿಸಿದ್ದರು. ಆ ನಂತರ ಅವುಗಳನ್ನು ತಂದು ತಮ್ಮ ಮೂರು ಎಕರೆ ಪ್ರದೇಶದಲ್ಲಿ ಬೆಳೆಸಿದ್ದಾರೆ.
ಸದ್ಯ ಈಗ ಕೆಲ ಗಿಡಗಳು ಹೂ ಬಿಟ್ರೆ..ಇನ್ನೋ ಕೆಲವು ಗಿಡಗಳಲ್ಲಿ ಸಣ್ಣ ಕಾಯಿಗಳು ಬಿಟ್ಟಿವೆ.ಉಳಿದಂತೆ ಹಲವು ಗಿಡಗಳಲ್ಲಿ ಈಗಾಗಲೇ ಸೇಬು ಹಣ್ಣಾಗಿವೆ.ಆದರೆ ಈ ಬೆಳೆಯ ಇಳುವರಿ ಕಡಿಮೆ ಪ್ರಮಾಣದಲ್ಲಿ ಇದೆ. ಹೀಗಾಗಿ ಇದರ ಬಗ್ಗೆ ರಾಜಸ್ಥಾನದ ವಿಜ್ಞಾನಿಗಳ ಸಲಹೆ ಪಡೆಯಲು ಮುಂದಾಗಿದ್ದಾರೆ ಫಯಾಜ್.. ಆದರೆ ಕೊರೊನಾ ಲಾಕ್‌ಡೌನ್ ನಿಂದಾಗಿ ಆ ವಿಜ್ಞಾನಿಗಳು ಶಿರಾಕ್ಕೆ ಆಗಮಿಸಲು ಸಾಧ್ಯವಾಗಿಲ್ಲ..
ಒಟ್ನಲ್ಲಿ ಬರಡು ಭೂಮಿಯಲ್ಲಿ ಯಾವುದೇ ನೀರಾವರಿ ಸೌಲಭ್ಯ ಹೊಂದಿಲ್ಲದ ಈ ಪ್ರದೇಶದಲ್ಲಿ ತಮ್ಮ ಸ್ವಂತ ಅನುಭವ ಮತ್ತು ವಿವಿಧ ರಾಜ್ಯದ ರೈತರ ಮಾಹಿತಿಯಿಂದ ಕಾಶ್ಮೀರದ ಆ್ಯಪಲ್‌ನ್ನು ಕರ್ನಾಟಕದಲ್ಲೂ ಬೆಳೆಯಬಹುದು ಎಂಬುದನ್ನು ಫಯಾಜ್ ತೋರಿಸಿಕೊಟ್ಟಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version