ಆರೋಗ್ಯ / HEALTH

ಗ್ರಾಮಸ್ಥರಿಗೆ ಕಿರುಕುಳ.. ಅರಣ್ಯ ಅಧಿಕಾರಿಗಳಿಗೆ ಡಿಕೆ ಸುರೇಶ್ ತರಾಟೆ..

Published

on

ಆನೇಕಲ್(ಬೆಂ.ನಗರ): ತಮ್ಮನು ಕಾಪಾಡಬೇಕಾದ ಅಧಿಕಾರಿಗಳೆ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಈ ಕಾಡಂಚಿನ ಜನ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆಯೇ ಆರೋಪ ಮಾಡಿದ್ದಾರೆ.
ಹೌದು,ನಾವು ಹೇಳೋಕೆ ಹೊರಟಿರೋದು ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟದ ಬ್ಯಾಲಮರದದೊಡ್ಡಿ ಗ್ರಾಮಸ್ಥರ ಕುರಿತಾಗಿ.. ಈ ಗ್ರಾಮ ಬಹಳ ವರ್ಷಗಳ ಇತಿಹಾಸ ಹೊಂದಿದ್ದು,ಇತ್ತೀಚಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಗ್ರಾಮ ತಮ್ಮ ಇಲಾಖೆಗೆ ಸೇರಿಸಬೇಕು ಎಂದು ೨೦೦೬ರಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.ಈ ಕುರಿತು ಈಗಾಗಲೇ ವರುಷಗಳಿಂದ ಪ್ರಕರಣದ ವಾದ ವಿವಾದಗಳು ನಡೆಯುತ್ತಿದ್ದು ಇತ್ತೀಚೆಗೆ ಅರಣ್ಯ ಇಲಾಖೆಯವರು ಬಹಳ ಕಿರುಕುಳ ನೀಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಇನ್ನು ಹೊಲ ಹೂಳಲು ಹೋದ್ರೆ ಟ್ರಾಕ್ಟರ್ ಸೀಜ್ ಮಾಡುವುದು,ಸುಳ್ಳು ಪ್ರಕರಣಗಳು ದಾಖಲು ಮಾಡೋದು ಮಾಡ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು,ಎರಡು ದಿನಗಳ ಹಿಂದೆಯೂ ಸಹ ಅರಣ್ಯ ಅಧಿಕಾರಿಗಳಿಗೆ ಹಾಗು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಅದು ಪೋಲೀಸ್ ಠಾಣೆ ಮಟ್ಟಿಲೇರಿತ್ತು.
ಇದೇ ವೇಳೆ ಈ ವಿಷಯ ತಿಳಿದು ಇಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಅವಹಾಲನ್ನು ಆಲಿಸಿ ಅರಣ್ಯಅಧಿಕಾರಿಗಳಿಗೆ ತರಾಟಗೆ ತೆಗೆದುಕೊಂಡಿದ್ದಾರೆ.
ಇದೇ ಸಮಯದಲ್ಲಿ ಮಾತನಾಡಿದ ಡಿ.ಕೆ.ಸುರೇಶ್,ಅರಣ್ಯ ಇಲಾಖೆಯವರು ವಕ್ಕಲೆಬ್ಬಿಸುವ ಕೆಲಸ ಮಾಡ್ತಿದ್ದಾರೆ.ಇದೀಗ ಯಾವ ಸ್ಥಿತಿ ಇದೆಯೋ ಅದೇ ಸ್ಥಿತಿ ಕಾಪಾಡಿಕೊಂಡು ಹೋಗಬೇಕು ಹಾಗು ವ್ಯವಸಾಯ ಮಾಡಲು ಅವರಿಗೆ ತೊಂದರೆ ನೀಡಬಾರದು,ಜೊತೆಗೆ ದರ್ಪ ತೋರಿದ್ದ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Click to comment

Trending

Exit mobile version