ಜನಸ್ಪಂದನ

ಕೆಲವರ ವೈಯಕ್ತಿಕ ಚಟಕ್ಕೆ ಮಂಡ್ಯದ ಮೈಶುಗರ್ ಬಲಿ..

Published

on

ನಾಗಮಂಗಲ(ಮ0ಡ್ಯ): ಜಿಲ್ಲೆಯ ಕಬ್ಬು ಬೆಳೆಗಾರರ ಆಶಾಕಿರಣವಾಗಿದ್ದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನರಾರಂಭದ ವಿಷಯ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿರುವ ಬೆನ್ನಲ್ಲೆ ಸರ್ಕಾರಿ ಅಥವ ಖಾಸಗೀಕರಣ ಎಂಬ ಜಿಜ್ಞಾಸೆಯಲ್ಲಿರುವ ರೈತಾಪಿ ವರ್ಗಕ್ಕೆ ಹಾಲಿ-ಮಾಜಿ ಜನಪ್ರತಿನಿಧಿಗಳ ಹೇಳಿಕೆಗೆ ತಲೆನೋವಾಗಿ ಪರಿಣಮಿಸುತ್ತಿದೆ.
ನಾಗಮಂಗಲ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಜಿಲ್ಲೆಯ ಕೆಲ ಜನಪ್ರತಿನಿಧಿಗಳ ವೈಯಕ್ತಿಕ ಚಟದಿಂದ ಮೈಶುಗರ್ ಬಲಿಯಾಗಿದೆ.ಸದ್ಯ ಕಾರ್ಖಾನೆ ಆರಂಭಕ್ಕೆ ಅಡ್ಡಿಪಡಿಸುವ ಮೂಲಕ ಇವರು ಕಂಟಕವಾಗಿರುವುದು ಜಿಲ್ಲೆಯ ರೈತರಿಗೆ ಮಾಡುತ್ತಿರುವ ದ್ರೋಹ ಎಂದು ಜಿಲ್ಲೆಯ ಜೆಡಿಎಸ್ ಶಾಸಕರ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಇನ್ನು ಜಿಲ್ಲೆಯ ಕೆಲವರು ಏನಾದರೂ ಮಾಡಿ ಕಾರ್ಖಾನೆ ಆರಂಭವಾಗದAತೆ ಸಂಚು ರೂಪಿಸಿಕೊಂಡಿದ್ದಾರೆ.ಆದರೆ ಅದು ಅವರಿಗೆ ಗೌರವವಲ್ಲ.ನಾವು ಆರಂಭ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ,ಬೇರೆಯವರು ಆರಂಭ ಮಾಡುತ್ತಿದ್ದಾರಲ್ಲ ಎಂಬುದು ಜನಪ್ರತಿನಿಧಿಗಳಾದವರ ಉದ್ದೇಶವಾಗಿರಬೇಕು.ಆದರೆ ಅದು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಕಂಡುಬರುತ್ತಿಲ್ಲ.
ಜೊತೆಗೆ ಜಿಲ್ಲೆಯ ಜನರನ್ನು ಸಮಸ್ಯೆಗೆ ಸಿಲುಕಿಸುವಂತಹ ಕೆಲಸವನ್ನು ಜಿಲ್ಲೆಯ ಕೆಲವೇ ಕೆಲವು ರೈತಮುಖಂಡರು, ಜನಪ್ರತಿನಿಧಿಗಳು ಮಾಡುತ್ತಿದ್ದಾರೆ.ಇದು ದೊಡ್ಡ ಅಪರಾಧ. ಜಿಲ್ಲೆಯ ಎರಡು ಕಾರ್ಖಾನೆಗಳನ್ನು ಈ ಸರ್ಕಾರದಲ್ಲಿ ಆರಂಭವಾಗದAತೆ ತುಂಬಾ ಪ್ರಯತ್ನ ಮಾಡುತ್ತಿದ್ದಾರೆ.ಆದರೆ ಸಿಎಂ ಯಡಿಯೂರಪ್ಪ ಕಾರ್ಖಾನೆಯನ್ನು ಎಷ್ಟೇ ಆರ್ಥಿಕ ಸಂಕಷ್ಟಗಳಿದ್ದರೂ ಆರಂಭಿಸುವ ಭರವಸೆ ನೀಡಿದ್ದಾರೆ ಅದರಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಪರೋಕ್ಷವಾಗಿ ಬಿಜೆಪಿ ಓಲೈಸಿಕೊಳ್ಳುವ ಹಾಗೂ ಜೆಡಿಎಸ್ ವಿರೋಧಿಸುವ ಮಾತುಗಳಾಡಿದರು.
ಇದಕ್ಕು ಮುನ್ನ ಸಭೆಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಕಾರ್ಯಕರ್ತರು ಗುಂಪು ಗುಂಪಾಗಿ ಸೇರಿದ್ದರು.ಈ ಸಭೆಯಲ್ಲಿ ಪರಸ್ಪರ ಅಂತರ ಎಂಬುದು ಮಾಯವಾಗಿತ್ತು.ಇಷ್ಟಲ್ಲದೆ ಜೂ.೧ರಂದು ಚಲುವರಾಯಸ್ವಾಮಿರ ಹುಟ್ಟುಹಬ್ಬದ ನಿಮಿತ್ತ ನೂರಾರು ಸಂಖ್ಯೆಯ ಕಾರ್ಯಕರ್ತರು ಪರಸ್ಪರ ಅಂತರವಿಲ್ಲದೆ ಗುಂಪಾಗಿ ಸೇರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು.
ಇದೇ ವೇಳೆ ಜೂ.೭ ರಂದು ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷಗಾದಿಯ ಅಧಿಕಾರ ಸ್ವೀಕರಿಸುವ ವೇಳೆ ಕಾರ್ಯಕರ್ತರು ಬೆಂಬಲಿಸುವ ಬಗ್ಗೆ ಸಲಹೆ ಸೂಚನೆ ನೀಡಲಾಯಿತು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Click to comment

Trending

Exit mobile version