ಬೆಳಗಾವಿ

ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು.

Published

on

ಬೆಳಗಾವಿ: ಕೋವಿಡ್ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಇದರ ಹಿನ್ನೆಲೆ ಆಕ್ರೋಶಗೊಂಡ ರೋಗಿಯ ಸಂಬಂಧಿಕರು ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಗಾವಿಯ ಬಿಮ್ಸ ಆಸ್ಪತ್ರೆಯಲ್ಲಿ ನಡೆದಿದೆ. ರಾತ್ರಿ ಸುಮಾರು 9ಗಂಟೆ 15 ನಿಮಿಷಕ್ಕೆ ರೋಗಿಯ 10ಕ್ಕೂ ಹೆಚ್ಚು ಸಂಬಂಧಿಕರಿಂದ ಈ ದುಷೃತ್ಯ ಸಂಭವಿಸಿದ್ದು ಬೆಳಗಾವಿಯ ಜನರಲ್ಲಿ ಆತಂಕ ಸೃಷ್ಟಿಮಾಡಿದೆ. ನೋಡನೋಡುತ್ತಿದ್ದಂತೆ ಆಸ್ಪತ್ರೆಯ ಮುಂದೆ ನಿಂತಿದ್ದ ಅಂಬ್ಯುಲೆನ್ಸ್ ಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು,ಪೋಲಿಸರು ಬರುವಷ್ಟರಲ್ಲಿ ಅಂಬ್ಯುಲೆನ್ಸ್ ಸುಟ್ಟು ಕರಕಲಾಗಿದೆ. ಇಷ್ಟಕ್ಕೆ ನಿಲ್ಲದ ರೋಗಿ ಸಂಬಂಧಿಗಳ ಆಕ್ರಂಧನ ಆಸ್ಪತ್ರೆಯ ಒಳಗೆ ಇದ್ದಾಂತಹ ನರ್ಸ್ ಸೇರಿದಂತೆ ,ಡಾಕ್ಟರ್ಸ್ ಗಳ ಮೇಲು ಹಲ್ಲೆ ಮಾಡಲು ಮುಂದಾಗಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಸಿಎಂ ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮಿಷನರ್ ಡಾ. ಕೆ.ತ್ಯಾಗರಾಜ,ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

ಪಿ ಎಮ್ ಪಾಟೀಲ್. ಎಕ್ಸಪ್ರೆಸ್ ಟಿವಿ, ಬೆಳಗಾವಿ.

Click to comment

Trending

Exit mobile version