ಬೆಂಗಳೂರು

ಕೊರೊನಾ ಸೋಂಕಿಗೆ ಹೆದರಿ ಪ್ರಾಣ ಕಳೆದುಕೊಳ್ಳುವ ಮೊದಲು ಈ ಸ್ಟೋರಿ ನೋಡಿ..

Published

on

ಬೆಂಗಳೂರು: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು ಸೋಂಕಿನ ಭಯಕ್ಕೆ ಅದೆಷ್ಟೋ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದರೆ. ಕೊರೊನಾ ಬಂದರೆ ನಾವು ಗುಣಮುಖರಾಗುವುದಿಲ್ಲವೆಂದು ಪ್ರಾಣ ಕಳೆದುಕೊಳ್ಳುವವರು ಒಂದು ಕಡೆಯಾದ್ರೆ ಎಲ್ಲವನ್ನೂ ಮೆಟ್ಟಿ ಧೈರ್ಯದಿಂದ ಕೊರೊನಾದ ವಿರುದ್ಧ ಹೋರಾಡುವವರು ಮತ್ತೊಂದೆಡೆ. ನಗರದ ಚಿಕ್ಕಪೇಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದಂತಹ ಜಯಕುಮಾರ್ ಎಂಬಾತನಿಗೆ ಸೋಂಕು ಪತ್ತೆಯಾಗಿತ್ತು.ಎಲ್ಲರಂತೆ ಮೊದ ಮೊದಲು ಧೈರ್ಯ ಕಳೆದುಕೊಂಡಿದ್ದ ಇತ ಸ್ನೇಹಿತ ಶೇಖರ್ ರವರ ಮಾತಿನಿಂದ ಧೈರ್ಯತಂದುಕೊಂಡು ಬಿಬಿಎಂಪಿ ಆಫೀಸ್ ಗೆ ಕರೆ ಮಾಡಿ ಕೋವಿಡ್ ಆಸ್ಪತ್ರೆಗೆ ದಾಖಲಾದರು. ಎಲ್ಲೂ ಕೂಡ ಎದೆಗುಂದದೆ ಧೈರ್ಯದಿಂದಲೇ ಚಿಕಿತ್ಸೆ ಪಡೆದು ಕೇವಲ ಐದು ದಿನಗಳಲ್ಲಿ ಕೊರೊನಾ ರೋಗದಿಂದ ಗುಣಮುಕ್ತರಾಗಿ ಕೊರೊನಾವನ್ನು ಗೆದ್ದು ಬಂದಿದ್ದಾರೆ. ಸ್ನೇಹಿತ ಶೇಖರ್ ನೀಡಿದ ಆತ್ಮಸ್ಥೈರ್ಯ ನನ್ನನ್ನು ಸಾವಿನಂಚಿನಿಂದ ಪಾರುಮಾಡಿದೆ. ಕೊರೊನಾ ಸೋಂಕು ತಗಲಿದೆ ಅಂದಕ್ಷಣ ಸ್ನೇಹಿತರಾಗಲಿ,ನೆರೆಮನೆಯವರಾಗಲಿ ಧೈರ್ಯ ತುಂಬಿ ಪ್ರೋತ್ಸಾಹಿಸಿದರೆ ಯಾವ ರೋಗವನ್ನಾದರು ಜಯಿಸಿಬರಬಹುದು ಅಂತಹ ಕೆಲಸವನ್ನು ನನ್ನ ಸ್ನೇಹಿತ ಶೇಖರ್ ಮಾಡಿದ್ದಾರೆ. ಅವರು ಮಾಡಿದ ಸಹಾಯ,ಆತ್ಮಸ್ಥೈರ್ಯದಿಂದ ನಾನು ಗುಣಮುಖನಾಗಿದ್ದೇನೆ ಕೊರೊನಾ ಸೋಂಕಿಗೆ ಹೆದರಿ ಯಾರು ಕೂಡ ಜೀವವನ್ನು ಕಳೆದುಕೊಳ್ಳದೆ ಧೈರ್ಯದಿಂದ ಕೊರೊನಾದ ವಿರುದ್ದ ಹೊರಾಡಬೇಕು, ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು,ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಇದ್ದರಿಂದ ಕೊರೊನಾವನ್ನು ನಿಯಂತ್ರಣ ಮಾಡಬಹುದು ಎಂದು ಜಯಕುಮಾರ್ ತಿಳಿಸಿದ್ದಾರೆ.

Click to comment

Trending

Exit mobile version