ಸಿಂಧನೂರು

ರೌಡಕುಂದ ಶ್ರೀಗಳಿಗೆ ನುಡಿನಮನ..!

Published

on

ಸಿಂಧನೂರು: ರೌಡಕುಂದಿಯ ಮರಿಸಿದ್ದಲಿಂಗ ಶಿವಾಚಾರ್ಯ ಶ್ರೀಗಳ ಅಕಾಲಿಕ ನಿಧನ ಅವರ ಭಕ್ತ ವೃಂದವನ್ನು ಗರಬಡಿಸಿದೆ. ಶ್ರೀಗಳ ಆಶಯದಂತೆ ಎಲ್ಲ ಭಕ್ತ ಸಮೂಹ ಶ್ರೀಮಠವನ್ನು ಅಭಿವೃದ್ಧಿಗೊಳಿಸಬೇಕೆಂದು ರಂಭಾಪುರಿ ಖಾಸಾ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಸೋಮವಾರ ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಬಸನಗೌಡ ಬಾದರ್ಲಿ ಪೌಂಡೇಷನ್ನಿಂಾದ ರೌಡಕುಂದಿ ಶ್ರೀಗಳಿಗೆ ಹಮ್ಮಿಕೊಂಡಿದ್ದ ಮುಕ್ತಿ ದರ್ಶನಂ ನುಡಿನಮನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು. ಶ್ರೀಗಳ ಶಿವೈಕ್ಯರಾದ ಸುದ್ದಿ ಪ್ರತಿಯೊಬ್ಬರಿಗೂ ನೋವಿನ ಸಂಗತಿಯಾಗಿದೆ. ಶ್ರೀಗಳು ಕೇವಲ 12 ವರ್ಷದ ತಮ್ಮ ಪಟ್ಟಾಧಿಕಾರದಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮೀಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಠದಿಂದ ವಿವಿಧ ದಾನಿಗಳ ಸಹಯೋಗದಲ್ಲಿ ಹಮ್ಮಿಕೊಂಡು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದರು. ಪಂಚಪೀಠದಲ್ಲಿ ರಂಭಾಪುರಿ ಪೀಠಕ್ಕೆ ಶ್ರೀಗಳ ಒಡನಾಟ ಹೆಚ್ಚಾಗಿತ್ತು. ಅನೇಕ ಶಾಖಾಮಠಗಳ ಕೆಲಸ ಕಾರ್ಯಗಳಲ್ಲಿ ರೌಡಕುಂದಿ ಶ್ರೀಗಳ ಮುಂದಾಳತ್ವ ಹೆಚ್ಚಿತ್ತು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಚಿಂತಕರಾದ ವೈಜನಾಥ ಹಿರೇಮಠ, ಗವಿಸಿದ್ದಪ್ಪ ಕಾನಿಹಾಳ, ಹಿರಿಯ ಪತ್ರಕರ್ತ ಪ್ರಹ್ಲಾದಗುಡಿ, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ : ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version