ಶಿರಾ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2020 ರ ಹೊಸ ಶಿಕ್ಷಣ ನೀತಿ ಜಾರಿ….

Published

on

ಶಿರಾ :ಸ್ವದೇಶೀ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ- 2020 ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ದೊರೆತು ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗುವುದು ಎಂದು ಶಿಕ್ಷಣ ತಜ್ಞ ಹಾಗೂ ವಿಧಾನ ಪರಿಷತ್ ನ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸರ್ಕಾರಿ ಶಾಲೆಗಳು ಸಬಲೀಕರಣವಾಗಿ ಪೋಷಕರು ಸಹ ಸರ್ಕಾರಿ ಶಾಲೆಗಳ ಕಡೆ ಒಲವು ತೋರಿಸಲಿದ್ದಾರೆ. ಹೊಸ ಶಿಕ್ಷಣ ನೀತಿಯಿಂದಾಗಿ ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಗೊಳ್ಳಲಿದೆ. ಜೊತೆಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುವುದರಿಂದ ಮಕ್ಕಳ ಶೈಕ್ಷಣಿಕ ಮಟ್ಟ ಸಹ ಹೆಚ್ಚುವುದು ಇದರಿಂದಾಗಿ ಸಶಕ್ತ ಯುವ ಭಾರತ ನಿರ್ಮಾಣವಾಗುವುದು ಎಂದರು. ಹೊಸ ಶಿಕ್ಷಣ ನೀತಿಯಿಂದ ಕಲಿಕಾ ಮಟ್ಟ ಹೆಚ್ಚುವುದು ಜೊತೆಗೆ ಯಾವುದೇ ಕಾರಣಕ್ಕೂ ಅಪೂರ್ಣವಾಗುವುದಿಲ್ಲ, ಒಂದು ವರ್ಷ ಪೂರೈಸಿದರೆ ವೃತ್ತಿಪರ ವಿಷಯಕ್ಕನುಗುಣವಾಗಿ ಪ್ರಮಾಣ ಪತ್ರ, ಎರಡು ವರ್ಷಕ್ಕೆ ಡಿಪ್ಲೋಮಾ, ಮೂರು ವರ್ಷಕ್ಕೆ ಪದವಿ ಇದರ ಜೊತೆಗೆ ಐಚ್ಚಿಕ ವಿಷಯಕ್ಕೆ 4 ವರ್ಷದ ಪದವಿಯನ್ನು ಪಡೆಯಬಹುದಾಗಿದೆ ಎಂದರು. ಹೊಸ ನೀತಿಯಿಂದಾಗಿ ಈಗಾಗಲೇ ಅಸ್ಥಿತ್ವದಲ್ಲಿರುವ ಶಿಕ್ಷಣ ನೀತಿಗೆ ಯಾವುದೇ ರೀತಿಯ ದಕ್ಕೆಯಾಗುವುದಿಲ್ಲ. 2021 ರಿಂದ ಪ್ರಾರಂಭವಾಗಿ 2030 ರವರೆಗೆ ಹಂತ ಹಂತವಾಗಿ ಜಾರಿಗೊಳಿಸಲು ತೀರ್ಮಾನಿಸಿರುವುದು ಸರ್ಕಾರದ ದೂರ ದೃಷ್ಟಿಕೊಂದು ಉದಾಹರಣೆಯಾಗಿದೆ. ಪ್ರತಿ ಗ್ರಾಮಕ್ಕೊಂದು ಪೂರ್ವ ಪ್ರಾಥಮಿಕ ಹಾಗೂ ಒಂದು ಮತ್ತು ಎರಡನೇ ತರಗತಿಗೆ ಶಾಲಾ ಸಂಕೀರ್ಣ, ಗ್ರಾಮ ಪಂಚಾಯಿತಿಗೊಂದು ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಸಂಕಿರ್ಣ ಹಾಗೂ ಹೋಬಳಿ ಮಟ್ಟಕ್ಕೊಂದು ಪದವಿ ಕಾಲೇಜು ಪ್ರಾರಂಭಿಸಿ ಪ್ರತಿಭಾವಂತ ತರಭೇತಿ ಪಡೆದ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಶಾಲಾ ವಾಹನದ ವ್ಯವಸ್ಥೆ ಮಾಡಿದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಜಾರಿಗೊಳ್ಳುವುದು ಎಂದು ನಿವೃತ್ತ ಪ್ರಾಂಶುಪಾಲ ಬಿ.ಗೋವಿಂದಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click to comment

Trending

Exit mobile version