ಸಿಂಧನೂರು

ಬಂಜಾರ,ಭೋವಿ, ಕೋರಚ, ಕೋರವ.ಕೋರಮ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ..

Published

on


ಸಿಂಧನೂರು:ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಕರ್ನಾಟಕ ಅಸ್ಪೃಶ್ಯ ಸಮಾಜಗಳ ಮಹಾಸಭ ತಾಲೂಕು ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವ ಬಂಜಾರ.ಭೋವಿ. ಕೋರಚ.ಕೋರವ.ಕೋರಮ ಜಾತಿಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.1950 ರಲ್ಲಿ ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಈ ಜಾತಿಗಳು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಶಿಫಾರಸ್ಸು ಮಾಡಿದರು. ಸಂವಿಧಾನ ಅನುಚ್ಛೇದ 358(5)(ಎ) ರ ಅನ್ವಯ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ನಿರ್ಲಕ್ಷ್ಯ ವಹಿಸಿದರಿಂದ ರಾಷ್ಟ್ರಪತಿ ಗಳ ಅಂಕಿತಗಳೊಂದಿಗೆ ಸಂಸತ್ತಿನಲ್ಲಿ ಚರ್ಚೆಗೆ ಬಂದರೂ.
ಅಂಗೀಕಾರವಾಗದಿದ್ದರೂ.
ಇಂದಿಗೂ ಅನಧಿಕೃತವಾಗಿಯೇ ಬಂಜಾರ.ಭೋವಿ.ಕೋರಚ.ಕೋರವ.
ಕೋರಮ ಜಾತಿಗಳಿಂದ ಪಟ್ಟಿ ಯಿಂದ ಉಳಿದು ಕೊಂಡಿವೆ. ರಾಯಚೂರಿನ ಮಹೇಂದ್ರ ಮತ್ತು ಇತರೆ ಮೂವರು ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದಾವಿ ಹೂಡಿದ ನಂತರ
ಫೆಬ್ರವರಿ 2 ರಲ್ಲಿ ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ನಾಲ್ಕು ವಾರಗಳಲ್ಲಿ ಅಹವಾಲು ಸಲ್ಲಿಸಲು ನಿರ್ದೇಶನ ನೀಡಿರುವುದರಿಂದ ಸದರಿ ಆಯೋಗವು ಏಪ್ರಿಲ್ ನಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವೊಂದನ್ನು ಬರೆದು ವರದಿಯನ್ನು ಕೇಳಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಆಗಿರುವ ಸಂವಿಧಾನಿಕ ಲೋಪವನ್ನು ಮನವರಿಕೆ ಮಾಡಿಕೊಡಲು ಅವಕಾಶ ಲಭಿಸಿದೆ ಕಾರಣ ಅನಧಿಕೃತವಾಗಿ ಪರಿಶಿಷ್ಟ ಜಾತಿ ಯಲ್ಲಿರುವ
ಬಂಜಾರ.ಭೋವಿ.ಕೋರಚ.ಕೋರವ.
ಕೋರಮ ಕೈ ಬಿಡುವಂತೆ ಹೊಸಳ್ಳಿ(ಇ.ಜೆ) ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂಧರ್ಭದಲ್ಲಿ ನಾಗರಾಜ ಸಾಸಲಮರಿ. ಸಂಗಮೇಶ ಹೆಚ್. ಮುಳ್ಳುಮರಿಯಪ್ಪ.ಈರಣ್ಣ ಸುಲ್ತಾನಪೂರ.ವಿರೇಶ್ ಹೊಸಳ್ಳಿ.ಇ.ಜೆ. ಮಲ್ಲಿಕಾರ್ಜುನ ಗೊರೆಬಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವರದಿ-ಸೈಯದ್ ಬಂದೇನವಾಜ್

Click to comment

Trending

Exit mobile version