ಮಂಡ್ಯ

ನಾಗಮಂಗಲದಲ್ಲಿ ಸರಳತೆಯ ಸಂಭ್ರಮದ ಸ್ವಾತಂತ್ರ್ಯೋತ್ಸವ.

Published

on

ನಾಗಮಂಗಲ:ಸಾಮೂಹಿಕ ಸಂಕಲ್ಪ ಮತ್ತು ಸಹಸ್ರಾರು ಜನರ ಪ್ರಾಣತ್ಯಾಗದಿಂದ ಸ್ವಾತಂತ್ರ್ಯ ದೊರೆತ ಭಾರತ ದೇಶದ ನಮ್ಮನ್ನು ಹೊತ್ತಿರುವ ಈ ಭೂಮಿ ಹೆತ್ತ ತಾಯಿಗೆ ಸಮಾನ ಎಂದು ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 74 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.ನಮ್ಮ ದೇಶಕ್ಕೆ 5000 ಕ್ಕೂ ಹೆಚ್ಚುವರ್ಷಗಳ ಇತಿಹಾಸವಿದೆ. ಅಂತಹ ಭಾರತದ ಸಂಸ್ಕøತಿ, ಸಂಸ್ಕಾರ ಮತ್ತು ಪರಂಪರೆ ವಿಶ್ವಕ್ಕೆ ಮಾದರಿ ಹಾಗೂ ಪ್ರಶಾಂಸನೀಯ. ಸಹಬಾಳ್ವೆ, ಸಹಕಾರ ಮತ್ತು ಐಕ್ಯತೆಯ ಉದ್ದೇಶದ ಸ್ವಾತಂತ್ರ್ಯ ಭಾರತದ ಮುಂದೆ ಅನೇಕ ಸಮಸ್ಯೆಯ ಸವಾಲುಗಳಿವೆ. ಇವುಗಳ ಜೊತೆಗೆ ದ್ವೇಷ, ಅಸೂಯೆ, ಸ್ವಾರ್ಥ ಹಾಗೂ ದುಶ್ಚಟಗಳಿಂದ ಮುಕ್ತಭಾರತ ನಿರ್ಮಾಣಕ್ಕೆ ಯುವಶಕ್ತಿ ಕಟಿಬದ್ದ್ದವಾಗಿ ನಿಲ್ಲಬೇಕಾಗಿದೆ. ಜಾಗತಿಕರಣದ ಹಿನ್ನಲೆಯಲ್ಲಿ ದೇಶದ ಅಭಿವೃದ್ದಿಗೆ ಅನೇಕ ಅವಕಾಶಗಳಿವೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚೆಯಲ್ಲ ಬದಲಿಗೆ ಮನುಧರ್ಮದ ಮೌಲ್ಯ. ದೇಶದ ಅಭಿವೃದ್ದಿಗೆ ಕಂಟಕವಾಗಿ ಪರಿಣಮಿಸಿರುವ ಕೊರೊನಾ ನಿಯಂತ್ರಣದಲ್ಲಿ ಅಧಿಕಾರಿಗಳ ಶ್ರಮಕ್ಕಿಂತ ಸಿಬ್ಬಂದಿಗಳ ಸೇವೆ ಅತ್ಯಮೂಲ್ಯವಾದದ್ದು. ತಮ್ಮ ಜೀವದ ಹಂಗು ತೊರೆದು ನಾಗರೀಕರ ಜೀವ ರಕ್ಷಣೆಗಾಗಿ ಕೆಳಹಂತದ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಜಾಗೃತರಾಗಿ ಕರೊನಾ ಸೇನಾನಿಗಳ ಸೇವೆಗೆ ಸಹಕರಿಸುವಂತೆ ಮನವಿ ಮಾಡಿದರು.ಧ್ವಜಾರೋಹಣ ನೆರವೇರಿಸಿ ತಾಲ್ಲೂಕಿನ ಜನತೆಗೆ ಸ್ವಾತಂತ್ಯೋತ್ಸವದ ಸಂದೇಶವನ್ನು ತಿಳಿಸಿದ ತಹಸೀಲ್ದಾರ್ ಕುಂಞ ಅಹಮ್ಮದ್, ಅನೇಕ ಮಹಾನೀಯರ ತ್ಯಾಗ ಬಲಿದಾನದ ಪ್ರತಿಫಲವೇ ಇಂದಿನ ಸ್ವಾತಂತ್ರ್ಯೋತ್ಸವ. ದೇಶವು 73 ವರ್ಷಗಳ ನಂತರ ಪ್ರಪಂಚದಲ್ಲಿ ಅತಿವೇಗವಾಗಿ ಡಿಜಿಟಲ್ ಯುಗದತ್ತಾ ದಾಪುಗಾಲಿನಲ್ಲಿ ಸಾಗುತ್ತಿದ್ದು ಅದಕ್ಕೆ ಎಲ್ಲರು ಮನ್ನಣೆ ನೀಡಬೇಕಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ತಾಲೂಕು ಆಡಳಿತದ ಜತೆ ಕೈಜೋಡಿಸಿ ಕೋವಿಡ್ ಮುಕ್ತ ತಾಲೂಕನ್ನಾಗಿಸುವ ಗುರಿ ಪ್ರತಿಯೊಬ್ಬರ ಸಂಕಲ್ಪವಾಗಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ನಮ್ಮ ದೇಶದ ಸಂವಿಧಾನದ ಸಂಕಲ್ಪ ಸಾಕಾರಗೊಂಡಾಗ ಮಾತ್ರ ಭಾರತ ಅರ್ಥಪೂರ್ಣ ಸ್ವಾತಂತ್ರ್ಯ ದೇಶವಾಗುತ್ತದೆ. ದೇಶದ ಐಕ್ಯತೆಗೆ ಧಕ್ಕೆಯಾಗದಂತೆ ತ್ಯಾಗ ಅಥವ ಸೇವೆ, ಶಾಂತಿ ಅಥವ ಸಹಬಾಳ್ವೆಯ ಜೊತೆಗೆ ಸಂಸ್ಕøತಿ ಅಥವ ಪರಂಪರೆಯ ಸಾರ್ವಭೌಮತ್ವವನ್ನು ಉಳಿಸುವ ಮತ್ತು ಬೆಳೆಸುವ ಪ್ರಮಾಣಿಕ ಪ್ರಯತ್ನ ನಮ್ಮದಾಗಬೇಕು. ಆಗಮಾತ್ರ ನಮ್ಮ ಸಂವಿಧಾನದ ಘನತೆ ವಿಶ್ವವ್ಯಾಪ್ತಿ ಬೆಳಗಲು ಸಾಧ್ಯ ಎಂದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಸರ್ವೆಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ದಿನದ ಮಹತ್ವದ ಜೊತೆಗೆ ಕರೊನಾ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ನಿಯಮ ಹಾಗೂ ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳ ಉಳಿವಿನ ಅವಶ್ಯಗಳ ಬಗ್ಗೆ ತಿಳಿಸಿದರು.
ಇದೇ ವೇದಿಕೆಯಲ್ಲಿ ಕರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರು, ಆಂಬ್ಯುಲೆನ್ಸ್ ಚಾಲಕರು ಹಾಗೂ ಸ್ವಯಂ ಸೇವಕರನ್ನು ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ತಾಲೂಕಿನ 05 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ಪ್ರಾಸ್ತವಿಕನುಡಿಗಳೊಂದಿಗೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ ಕಾರ್ಯಕ್ರಮವನ್ನು ನಿರೂಪಿಸಿದರು. ತಾಲೂಕಿನಾಧ್ಯಂತ ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಕ್ರೀಡಾಂಗಣದ ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ದಾಸೇಗೌಡ, ತಾ.ಪಂ.ಸದಸ್ಯರಾದ ಗಿರೀಶ್ ಮತ್ತು ಹೇಮರಾಜ್, ಡಿವೈಎಸ್‍ಪಿ ವಿಶ್ವನಾಥ್, ತಾ.ಪಂ.ಇಒ ಅನಂತರಾಜು, ಸಿಪಿಐ ರಾಜೇಂದ್ರ, ಸಿಡಿಪಿಒ ರಾಜನ್, ಪಿಎಸ್‍ಐ ರವಿಕಿರಣ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರ ವರ್ಗ ಹಾಜರಿದ್ದರು. ಶಾಲಾ ಮಕ್ಕಳ ಗೈರು ಸರಳ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.

ಎಸ್.ವೆಂಕಟೇಶ್.
ಎಕ್ಸ್‌ಪ್ರೆಸ್‌ ಟಿವಿ
ನಾಗಮಂಗಲ.

Click to comment

Trending

Exit mobile version