ರಾಯಚೂರು

ವಯೋ ವೃದ್ಧರಿಗೆ ಅಸರೆಯಾಗಬೇಕಿದೆ ಗಣೇಶ ಚತುರ್ಥಿ..!

Published

on

ರಾಯಾಚೂರು: ರಾಯಾಚೂರು ಜಿಲ್ಲೆಯ ಕವಿತಾಳ್ ಪಟ್ಟಣದಲ್ಲಿ ವಯೋ ವೃದ್ಧರಿಗೆ ವರದಾನ ವಾಗಬೇಕಿದ್ದ ಗಣೇಶ್ ಚತುರ್ಥಿ ಹಬ್ಬ ಕೊರೊನಾ ಮಾಹ ಮಾರಿಯಿಂದ ವೃದ್ಧ ದಂಪತಿಗಳಿಗೆ ಸಂಕಷ್ಟದ ದಿನಗಳನ್ನು ಎದುರಿಸುವಂತೆ ಮಾಡಿದೆ. ಅದೊಂದು ಪುಟ್ಟ ಮನೆ ಸುತ್ತಲೂ ತಗಡಿನಿಂದ ಮನೆಯನ್ನು ನಿರ್ಮಿಸಲಾಗಿದೆ. ವೃದ್ಧ ದಂಪತಿಗಳಿಗೆ ಮಕ್ಕಳ ಭಾಗ್ಯ ಇಲ್ಲ ಎಷ್ಟೇ ಕಷ್ಟವಾದರೂ ದುಡಿದು ತಿನ್ನುವ ಹಂಬಲ, ಸ್ವಂತ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಮಾಹಾಮಾರಿಯಿಂದ ಜನಸಾಮಾನ್ಯರ ಬದುಕು ಬಿದಿಗೆ ಬಂದಿದೆ.ಅಂತಹದರಲ್ಲಿ ಶ್ರೀಮತಿ ಕಾಳಮ್ಮ ಮತ್ತು ಆಕೆಯ ಪತಿ ನಾರಾಯಣಪ್ಪ ಜಿನಗಾರ ಗಣೇಶ ಚತುರ್ಥಿ ,ಗೌರಿ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ಬಂದರೆ ಸಾಕು ಇವರು ಎಲ್ಲಾ ರೀತಿಯ ಮೂರ್ತಿಗಳನ್ನು ಸಾವಿರಗಟ್ಟಲೆ ಸಾಲ ಮಾಡಿ ಸಿದ್ಧಪಡಿಸುತ್ತಿದ್ದರು.ಆದರೆ ಕೊರೊನಾ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆ ಆಚರಣೆ ಮಾಡಬೇಕಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದೆ..
ಇನ್ನು ಕೊರೊನಾ ಭಯ ಇರುವುದರಿಂದ ಜನಸಾಮಾನ್ಯರು ಯಾರು ಗಣೇಶನ ಮೂರ್ತಿ ಖರೀದಿಸಲು ಬರುತ್ತಿಲ್ಲ ವೃದ್ಧ ದಂಪತಿಗಳಿಗೆ ಆಸರೆ ಯಾಗಬೇಕಿದ್ದ ಹಬ್ಬವೂಈ ಬಾರಿ ಸಂಕಷ್ಟದ ದಿನಗಳನ್ನು ಎದುರು ನೋಡುವಂತೆ ಮಾಡಿದೆ ಎಂದು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸೈಯದ್ ಆಜಂ,ಪಾಶ, ಬನ್ಸಿ ಲಾಲ್ ಸಿಂಗ್ ಠಾಕೂರ. ಗುಂಡಯ್ಯತಾತ ಬೇಸರ ವ್ಯಕ್ತ ಪಡಿಸಿದ್ದಾರೆ.

ವರದಿ- ಸುಲ್ತಾನ್ ಬಾಬು ಎಕ್ಸ್ ಪ್ರೆಸ್ ಟಿವಿ ಸಿರವಾರ

Click to comment

Trending

Exit mobile version