ಶಿರಾ

ನಗರ ಯೋಜನಾ‌ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ..!

Published

on

ಶಿರಾ:- ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಈರಣ್ಣ ಮತ್ತು ನಿರ್ದೇಶಕರಾಗಿ
ಶ್ರೀಧರ್ ಮೂರ್ತಿ
ಸುರೇಶ್, ಮದನ್ ಶಿವಪ್ರಕಾಶ್ ಅಧಿಕಾರ ಸ್ವೀಕರಿಸಿದರು. ನಗರದ ಅಮರ ಪುರ ರಸ್ತೆಯಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಈರಣ್ಣ
ಐತಿಹಾಸಿಕ ನಗರ ಸುಸಜ್ಜಿತವಾಗಿ, ಸುಂದರವಾಗಿ ರೂಪುಗೊಂಡಿದೆ. ಇದರ ಇತಿಹಾಸ ಮತ್ತು ಸೌಂದರ್ಯಕ್ಕೆ ಧಕ್ಕೆ ಬಾರದ ರೀತಿ ಸಮಿತಿ ಕೆಲಸ ನಿರ್ವಹಿಸಲಿದೆ ಎಂದರು.
ನಗರದಲ್ಲಿ ಹಲವು ಬಡಾವಣೆಗಳು ನಿರ್ಮಾಣಗೊಂಡಿದ್ದು, ಇವುಗಳಲ್ಲಿ ಹಳೆಯ ಬಡಾವಣೆ ಗಳಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಕಂಡುಬರುತ್ತದೆ ಮತ್ತು ಅವುಗಳಲ್ಲಿ ಪರವಾನಿಗೆ ನೀಡಲಾಗುತ್ತಿಲ್ಲ ಎಂಬ ದೂರ ಬರುತ್ತಿದ್ದ ಈ ಬಗ್ಗೆ ಸಂಬಂಧ ಪಟ್ಟ ಸಚಿವರು ಗಮನ ಸೆಳೆದು
ಮುಂದಿನ ದಿನಗಳಲ್ಲಿ ನಿಯಮಾನುಸಾರ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.ನಗರ ಸಾವಿರಾರು ಎಕರೆ ವಿಸ್ತಾರದಲ್ಲಿ ನಿರ್ಮಾಣಗೊಂಡಿದ್ದು, ನಗರಕ್ಕೆ
ಕ್ಕೆ ಹೊಂದಿಕೊಂಡಿರುವ ಇತರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಒಳಪಡಲಿವೆ. ಈ ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ನಗರ ಯೋಜನಾ ಪ್ರಾಧಿಕಾರ ಸೂಕ್ತ ಯೋಜನೆ ರೂಪಿಸಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಇಂತಹ ಪ್ರಯತ್ನಕ್ಕೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.ತಾಲ್ಲೂಕು ಬಾಜಪದಲ್ಲಿ ಬಿನ್ನಮತ
ಇತ್ತ ನಗರ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶನ ರಾಜ್ಯ ಸರ್ಕಾರ ಮಾಡಲಾಗಿದೆ. ಅದರೆ ತಾಲ್ಲೂಕು ಬಾಜಪದಲ್ಲಿ ಹಲವು ಗುಂಪು ಗರಿಕೆಗೆ ಪುಷ್ಟಿ ನೀಡುವಂತೆ ಹಲವಾರು ಮುಖಂಡ ಗೈರು ಹಾಜರಿಯಲ್ಲಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಅಧಿಕಾರ ಸ್ವೀಕರ ಸಮಾರಂಭ ಸಾಕ್ಷಿಯಾಯಿತು. ಈ ಬಗ್ಗೆ ಮುಖಂಡರು ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹೀಗೆ ಬಾಜಪದಲ್ಲಿ ಯಾವುದೇ ಸದಸ್ಯರ ನೇಮಕ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳದೆ ಸದಸ್ಯರ ಆಯ್ಕೆ ಮಾಡಲಾಗಿದೆ ಎಂದು ಉತ್ತರ ನೀಡಿದರು.

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Click to comment

Trending

Exit mobile version