ಸಿಂಧನೂರು

ಪ್ರಶಾಂತ್ ಭೂಷಣ್ ನ್ಯಾಯಾಂಗನಿಂದನೆ ಪ್ರಕರಣವನ್ನು ಕೈಬಿಡಬೇಕೆಂದು ಪ್ರತಿಭಟನೆ.!

Published

on

ಸಿಂಧನೂರು: ನಗರದ ತಹಶಿಲ್ದಾರ ಕಚೇರಿ ಮುಂದೆ ಪ್ರಗತಿಪರ ಸಂಘಟ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಯಿತು.ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಯಪ್ಪ ವಕೀಲರು ಮಾತನಾಡಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಬಗ್ಗೆ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಮಾಡಿರುವ ಟ್ವಿಟ್‌ಗಳು ವಿಮರ್ಶೆಗಳೇ ಹೊರತು ನಿಂದನೆಗಳಲ್ಲ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಚನಾತ್ಮಕ ವಿಮರ್ಶೆಗಳಿಂದ ನ್ಯಾಯಾಂಗ ವ್ಯವಸ್ಥೆಗೆ ಯಾವುದೇ ಪೆಟ್ಟಾಗುವುದಿಲ್ಲ, ಬದಲಾಗಿ ಗಟ್ಟಿಯಾಗುತ್ತದೆ ಎಂಬುದನ್ನು ಪರಿಗಣಿಸಿ. ಪ್ರಶಾಂತ್ ಭೂಷಣ್ ಅವರಿಗೆ ಶಿಕ್ಷೆ ವಿಧಿಸದೇ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈ ಬಿಡಬೇಕು ಎಂದು ಹೇಳಿದರು. ನಂತರ ಚಂದ್ರಶೇಖರ್ ಗೊರೆಬಾಳ ಸೇರಿದಂತೆ ಇತರರು ಮಾತನಾಡಿದರು.ನಂತರ ಬರೆದ ಮನವಿ ಪತ್ರವನ್ನು ತಹಶಿಲ್ದಾರ ಮೂಲಕ ಸುಪ್ರೀಂ ಕೋರ್ಟ್ ಮುಖ್ಯನ್ಯಾಯ ಮೂರ್ತಿಗಳಿಗೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಬಸವರಾಜ ಎಕ್ಕಿ, ನಾಗರಾಜ ಪೂಜಾರ್, ದೇವೇಂದ್ರಗೌಡ, ಡಾ. ವಸೀಮ್ ಅಹಮದ್, ಶೇಕ್ಷಾಖಾದ್ರಿ, ನಿರುಪಾದೆಪ್ಪ ಗುಡಿಹಾಳ ವಕೀಲರು, ಕೃಷ್ಣ ವಕೀಲರು, ನಾರಾಯಣ ಬೆಳಗುರ್ಕಿ, ಗುಂಡಪ್ಪ ಬಳಿಗಾರ, ನರಸಿಂಹಪ್ಪ, ಯಂಕಪ್ಪ ಕೆಂಗಲ್, ವಿರಭದ್ರಗೌಡ ಅಮರಾಪುರ್, ಶಂಕರ್ ಗುರಿಕಾರ್ ಸೇರಿದಂತೆ ಹಲವಾರು ಭಾಗವಹಿಸಿದರು.

ವರದಿ- ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version