ಬೆಂಗಳೂರು

ಕೊವಿಡ್-19 ಚಿಕಿತ್ಸೆಗೆ ಬೆಂಗಳೂರಿನಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ..!

Published

on

ಬೆಂಗಳೂರು:ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಕೊವಿಡ್-19 ಆಸ್ಪತ್ರೆಯೊಂದು ಬೆಂಗಳೂರಿನಲ್ಲೇ ಆರಂಭವಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಇದರಿಂದ ಯಾವುದೇ ರೀತಿ ಆರ್ಥಿಕ ಹೊರೆ ಆಗುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಕಳೆದ ಬುಧವಾರ ಬೆಂಗಳೂರು ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿರುವ ಚರಕ ಆಸ್ಪತ್ರೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಿದ್ದರು.ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿದ್ದು ಕಳೆದ ನಾಲ್ಕು ತಿಂಗಳ ಹಿಂದೆಯೇ ಇಂಥದೊಂದು ಆಲೋಚನೆ ಹೊಳೆದಿತ್ತು,ಕೊವಿಡ್-19 ಸೋಂಕಿತರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಕರಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುವಂತಹಾ ಆಸ್ಪತ್ರೆಯನ್ನು ತೆರೆಯುವುದಕ್ಕೆ ತೀರ್ಮಾನಿಸಲಾಯಿತು,ಈ ಬಗ್ಗೆ ಇನ್ಫೋಸಿಸ್ ಸಂಸ್ಥೆ ಕೂಡಾ ಆಸಕ್ತಿ ತೋರಿದು ಸುಧಾಮೂರ್ತಿಯವರರು ಆಸ್ಪತ್ರೆ ತೆರೆಯಲು ಕೈಜೋಡಿಸಿದ್ದು, ಸುಮಾರು 11ಕೋಟಿ ಹಣದ ನೆರವು ನೀಡಿದ್ದಾರೆ.ಆದಷ್ಟು ಬೇಗ ಾಸ್ಪತ್ರೆ ನಿರ್ಮಾಣವಾಗಲಿದೆಯೆಂದುಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು..

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version