ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ ಇಂದು ವಿಶೇಷವಾದ ದಿನ. ಕೋಟ್ಯಂತರ ಅಭಿಮಾನಿಗಳ ಅಭಿಮಾನಿ ಅಭಿನಯ ಚಕ್ರವರ್ತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಈ ಬಾರಿ ಸರಳವಾಗಿ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತೀ ವರ್ಷ ಹುಟ್ಟುಹಬ್ಬದ ದಿನ ಕಿಚ್ಚನ ಮನೆ ಮುಂದೆ ಅಭಿಮಾನಿಗಳ ದೊಡ್ಡ ದಂಡೇ ನೆರೆದಿರುತ್ತಿತ್ತು. ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ರಾತ್ರಿಯಿಂದಲೇ ಸುದೀಪ್ ಮನೆ ಮುಂದೆ ಕ್ಯೂ ನಿಂತಿರುತ್ತಿದ್ದರು. ನೆಚ್ಚಿನ ನಟನ ದರ್ಶನ ಮಾಡಿ, ಶುಭಹಾರೈಸಿ ಸಂತಸ ಪಡುತ್ತಿದ್ದರು. ಅಭಿಮಾನಿಗಳೊಂದಿಗೆ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಎಲ್ಲಾ ಸಂಭ್ರಮ, ಸಡಗರಗಳಿಗೆ ಬ್ರೇಕ್ ಬಿದ್ದಿದೆ. ಸಾಮಾಜಿಕ ಜಾಲತಾಣದ ಮೂಲಕವೇ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.
ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..