ತಿಪಟೂರು

ತಿಪಟೂರಿನಲ್ಲಿ ಕಳಪೆ ಕಾಮಗಾರಿ..ಶಾಸಕರ ವಿರುದ್ದ ಗುಡುಗಿದ ಜೆಡಿಎಸ್ ಕಾರ್ಯಾಧ್ಯಕ್ಷ..!

Published

on

ತಿಪಟೂರು: 5-6ಲಕ್ಷದ ಚಿಕ್ಕಪುಟ್ಟ ಕಾಮಗಾರಿಗಳಲ್ಲಿ ಅಳತೆಗೋಲು ಹಿಡಿದು ಸ್ಥಳದಲ್ಲೇ ನಿಂತುಕಾಮಗಾರಿ ಮಾಡುಸಿವ ಶಾಸಕ ಬಿ.ಸಿ.ನಾಗೇಶ್ ಹೇಮಾವತಿ ನಾಲೆ ವಿಸ್ತರಣೆಯಲ್ಲಿ ಕೋಟ್ಯಾಂತರ ರೂ ವೆಚ್ಚದ ಕಾಮಗಾರಿ ಕಳಪೆಯಾದರು ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆಂದು ಜೆ.ಡಿ.ಎಸ್ಕಾರರ್ಯಾಧ್ಯಕ್ಷ ಶಿವಸ್ವಾಮಿ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಜಿಲ್ಲೆಯ ರೈತರ ಜೀವನಾಡಿಯಾದ ಹೇಮಾವತಿ ನಾಲೆ ಅಗಲೀಕರಣ ಐದುನೂರು ಕೋಟಿಗಿಂತ ಹೆಚ್ಚಾಗಿದೆ.ಆದರೆ ಶಾಸಕರು ಇತ್ತ ಸುಳಿಯುತ್ತಿಲ್ಲ, ನಾಲೆಯ ಭದ್ರತೆಗೆ ಹಂತ ಹಂತವಾಗಿ ಕೆಂಪು,ಜೇಡಿ ಹಾಗೂ ಕಲ್ಲುಮಿಶ್ರಿತ ಮಣ್ಣನ್ನು ಉಪಯೋಗಿಸಿ, ಪ್ರತಿ ಹಂತದಲ್ಲೂ ರೋಲರ್ ಹೊಡೆದು ಭದ್ರಪಡಿಸಬೇಕು.ಆದರೆ ಯಾವುದೇ ನಿಯಮಪಾಲನೆ ಮಾಡುತ್ತಿಲ್ಲ ಕೇವಲ ಒಂದೇ ರೀತಿಯ ಮಣ್ಣನ್ನು ಹಾಗೂ ನಾಲೆಯ ನಿಯಂತ್ರಣಕ್ಕೆ ಕಾಂಕ್ರೀಟ್ ಅವಶೇಷಗಳನ್ನು ಉಪಯೋಗಿಸಿ ನಾಲೆಯ ಅಗಲೀಕರಣ ಮಾಡುತ್ತಿದ್ದಾರೆ.ನಾಲೆಯಲ್ಲಿ ಪ್ರತಿ ನಿಮಿಷಕ್ಕೆ 3000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ.ಜೋರಾಗಿ ಮಳೆ ಬಂದು,ನಾಲೆ ಹೊಡೆದು ಹೋದರೆ ಅನೇಕ ಹಳ್ಳಿಗಳು ಮುಳುಗಡೆಯಾಗಿ ಬಾರಿ ನಷ್ಠ ಉಂಟಾಗುತ್ತದೆ ಆದ್ದರಿಂದ ಶಾಸಕರು ಮುಂದಿನ ಚುನಾವಣೆ ದೃಷ್ಠಿಯಲ್ಲಿಟ್ಟು ಕೊಂಡು,ಆತ್ಮ ಸಾಕ್ಷಿಗೆ ವಂಚನೆ ಮಾಡಿಕೊಳ್ಳದೆ ಕ್ರಮ ಜರುಗಿಸಿಬೇಕೆಂದು ಒತ್ತಾಯಿಸಿದ್ದಾರೆ.

ವರದಿ-ಸಿದ್ದೇಶ್ ಎಕ್ಸ್ ಪ್ರೆಸ್ ಟಿವಿ ತಿಪಟೂರು..

Click to comment

Trending

Exit mobile version