ಬೆಂಗಳೂರು

2021 ರಿಂದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ..!

Published

on

ಬೆಂಗಳೂರು: ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಪ್ರಕಾರ, 2017 ರಿಂದೀಚೆಗೆ ಯಾವುದೇ ಹೊಸ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಮತ್ತು ಅದನ್ನು ವಾಹನ ಉತ್ಪಾದಕರು ಅಥವಾ ಡೀಲರ್ ಗಳು ಪೂರೈಸಬೇಕು.ಅಲ್ಲದೆ, ಸಾರಿಗೆ ವಾಹನಗಳ ಕ್ಷಮತಾ ಪತ್ರಗಳ ನವೀಕರಣಕ್ಕೂ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ 2019ರ ಅಕ್ಟೋಬರ್ 1 ರಿಂದೀಚೆಗೆ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಯಾವುದೇ ಥರ್ಡ್-ಪಾರ್ಟಿ ವಾಹನ ಇನ್ಯೂರೆನ್ಸ್ ಖರೀದಿಗೆ 2021ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಫಾಸ್ಟ್ಯಾಗ್ ಹೊಂದಿರಬೇಕು. ಈ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ಮೂಲಗಳಿಂದ ತಿಳಿದು ಬಂದಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Click to comment

Trending

Exit mobile version