ವಿಜಯಪುರ

ಎಸ್ಟಿ ಜಾತಿ ಪ್ರಮಾಣ ಪತ್ರಕ್ಕಾಗಿ ಮನವಿ ಸಲ್ಲಿಸಿದ ತಳವಾರ ಪರಿವಾರ ಸಮುದಾಯದ ಮುಖಂಡರು..!

Published

on

ವಿಜಯಪುರ: ನಿಂಬೆ ನಾಡಿನಲ್ಲಿ ಎಸ್ಟಿ ಜಾತಿ ಪ್ರಮಾಣಕ್ಕಾಗಿ ಅಲೆದಾಟ ನಡೆಸಿ ಸುಮಾರು 185 ದಿನ ಕಳೆದರೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮರಿಚಿಕೆಯಾಗಿದೆ. ಕೇಂದ್ರ ಸರಕಾರ ತಳವಾರ & ಪರಿವಾರ ಸಮುದಾಯಗಳಿಗೆ ಜಾತಿ ಕಾಯಿದೆ ತಿದ್ದುಪಡಿ ಮಾಡಿ ಅಧಿಕೃತ ಗೆಜಟ್ ಮಾಡಿದೆ. ಆದರೆ ರಾಜಕೀಯ ಷಡ್ಯತಂತ್ರದಿಂದ ರಾಜ್ಯ ಸರಕಾರ ವಿನಃ ಕಾರಣ ಗೊಂದಲ ಸೃಷ್ಟಿ ಮಾಡಿ ಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಕೂಡಲೇ ಕಾಳಜಿ ವಹಿಸಿ ನ್ಯಾಯ ಒದಗಿಸಬೇಕೆಂದು ಸಂಸದ ರಮೇಶ ಜಿಗಜಿವಣಿಗೆ ತಳವಾರ & ಪರಿವಾರ ಸಮುದಾಯದ ಮುಖಂಡರು ಮನವಿಸಲ್ಲಿಸಿದರು.ಇಂಡಿ ಪಟ್ಟಣದ ರೆಲ್ವೆ ಸ್ಟೇಷನ್ ರಸ್ತೆಯ ಮಾರ್ಗದಲ್ಲಿ ನೂತನವಾಗಿ ಬಯೊಗ್ಯಾಸ್ ಉದ್ಘಾಟನೆ ಸಮಾರಂಭದಲ್ಲಿ ಸಂಸದ ರಮೇಶ ಜಿಗಜಿನ್ನಿಗೆ ಮನವಿ ಸಲ್ಲಿಸಿ ಕೂಡಲೇ ಸೂಕ್ತ ನ್ಯಾಯ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು. ಇಂಡಿ ತಾಲೂಕು ತಳವಾರ – ಪರಿವಾರ ಸಮಾಜದ ಅಧ್ಯಕ್ಷ ಧರ್ಮರಾಜ ವಾಲಿಕಾರ, ಹುಚ್ಚಪ್ಪ ತಳವಾರ, ಹಣಮಂತ ಕೊರಳ್ಳಿ,ಡಾ.ಶ್ರೀಶೈಲ ಕೋಳಿ,ಶರಣಬಸು ವಾಲಿಕಾರ,ಅನೀಲ ಜಮಾದಾರ, ರವಿ ವಗ್ಗೆ, ಅಂಬಿರಿಷ್ ಕೊರಳ್ಳಿ,ಶ್ರೀನಿವಾಸ ರೂಗಿ ಉಪಸ್ಥಿತಿರು

ವರದಿ: ಶಂಕರ್ ಜಮಾದಾರ ಎಕ್ಸ್ಪ್ರೆಸ್ ನ್ಯೂಸ್ ಇಂಡಿ

Click to comment

Trending

Exit mobile version