ಹುಬ್ಬಳ್ಳಿ-ಧಾರವಾಡ

ಮನೆ ಮುಂದೆ ನಿಲ್ಲಿಸಿದ ಬೈಕ್ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..!

Published

on

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ , ಬೈಕ್ ಸುಟ್ಟ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.ಗೋಕುಲ ರಸ್ತೆಯ ಗಿರಿ ನಗರ ಮೂಲದ ವಿನಯ್ ಎಂಬುವರ ಮನೆಗೆ ನುಗಿದ್ದ 10 ಜನದ ತಂಡ ಹಲ್ಲೆ ನಡೆಸಿ, ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಮೋಟರ್ ಕದಿಯುತ್ತಿದ್ದ ವೇಳೆ ಶಬ್ದ ಕೇಳಿ ಹೊರ ಬಂದಿದ್ದ ವಿನಯ್ ಕಂಡ ದುಷ್ಕರ್ಮಿಗಳು, ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಗಿ ಗಾಯಗೊಂಡಿರುವ ವಿನಯ್ ಹಾಗು ವಿನಯ್ ಸಹೋದರಿಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಪ್ರಕರಣವನ್ನ ಹಳೆ ಹುಬ್ಬಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version