ಮೈಸೂರು

ಕಾಡಿನಲ್ಲೆ ಮೈಸೂರು ದಸರಾ ಗಜಪಡೆಯ ತಾಲೀಮು..!

Published

on

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಯ ತಾಲೀಮು ಕಾಡಿನಲ್ಲೇ ನಿರಾಂತಕವಾಗಿ ನಡೆಯುತ್ತಿದೆ.ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಐದು ಆನೆಗಳ ಲೀಸ್ಟ್ ಫೈನಲ್ ಆಗಿದೆ.ದಸರಾ ಉದ್ಘಾಟನೆಗೆ ದಿನಗಣನೆ ಕೂಡ ಆರಂಭವಾಗಿದೆ. ಈಗಾಗಲೇ ಆನೆಗಳು ಅರಮನೆ ನಗರಿಗೆ ಆಗಮಿಸಿ ಮೈಸೂರಿನ ರಾಜ ಬೀದಿಗಳಲ್ಲಿ ತಾಲೀಮು ಆರಂಭಿಸಬೇಕಿತ್ತು.ಆದರೆ ಕೊರೊನಾ ಭೀತಿಯಿಂದ ಸಾಂಪ್ರದಾಯಿಕ ಹಾಗೂ ಸರಳವಾಗಿ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ ತರುವಾಯ ಮೈಸೂರು ಅರಮನೆಗೆ ಸೀಮಿತವಾಗಿ ಸರಳವಾಗಿ ಜಂಬೂ ಸವಾರಿ ಮೆರವಣಿಗೆ ನಡೆಸಲು ತೀರ್ಮಾನ ಮಾಡಲಾಗಿದೆ. ಕೊರೊನಾ ಭೀತಿ ಇರುವ ಕಾರಣ ಮೈಸೂರಿಗೆ ಬರುವ ದಸರಾ ಗಜಪಡೆಗೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕು ದಮ್ಮನಕಟ್ಟೆಯ ಬಳ್ಳೆ ಆನೆ ಶಿಬಿರದಲ್ಲಿ ಆನೆಗಳ ತಾಲೀಮು ನಡೆಸಲಾಗುತ್ತಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version