ರಾಯಚೂರು

ಕುಡಿಯುವ ನೀರಿಗಾಗಿ ಜನರ ಪರದಾಟ..!

Published

on

ಲಿಂಗಸೂಗೂರು:ಬರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪರಾಂಪೂರ ಗ್ರಾಮದಲ್ಲಿ ಜನಪ್ರತಿನಿಧಿಗಳ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷದಿಂದ ಕುಡಿಯುವ ನೀರು, ಚರಂಡಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಲಿಂಗಸುಗೂರು ತಾಲೂಕಿನ ಡಿ ಎಸ್ ಎಸ್ ತಾಲೂಕ ಸಂಚಾಲಕ ಮಹಾದೇವಪ್ಪ ಪರಾಂಪುರ ಆರೋಪ ಮಾಡಿದರು.ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದು ಆದರೆ ಚಾಲನೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಕಲುಷಿತ ನೀರು ಕುಡಿದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಹಾಗೂ ಶುದ್ದ ಕುಡಿಯುವ ನೀರಿನ ಮೋಟಾರು, ನಲ್ಲಿ, ಸೇರಿದಂತೆ ಅದರ ಸಾಮಾಗ್ರಿಗಳನ್ನು ಮಾರಾಟ ಮಾಡಿದ್ದಾರೆ ಹಾಗೂ ಗ್ರಾಮದ ಶಾಲೆಯಲ್ಲಿ ಶೌಚಾಲಯ ಸೌಲಭ್ಯಗಳ ಇಲ್ಲ ಅರ್ಧಮರ್ಧ ಕಾಮಗಾರಿ ಮಾಡಿ ಬಿಲ್ ಮಾಡಿಕೊಂಡಿದ್ದಾರೆ. ಈ ಕೂಡಲೇ ಚುನಾಯಿತ ಜನಪ್ರತಿಧಿಗಳು ಹಾಗೂ ದೇವರ ಭೂಪೂರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡುವದರ ಜೊತೆಗೆ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಆದ್ಯತೆ ನೀಡಬೇಕು ಎಂದು ಡಿ ಡಿ ಎಸ್ ತಾಲೂಕ ಸಂಚಾಲಕ ಮಹಾದೇವಪ್ಪ ಪರಾಂಪುರ ಹಾಗೂ ಮುದಗಲ್ ಭಾಗದ ಡಿ ಎಸ್ ಎಸ್ ಮುಖಂಡ ಬಸವರಾಜ ಬಂಕದಮನಿ ಒತ್ತಾಯ ಮಾಡಿದರು.

ವರದಿ: ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Click to comment

Trending

Exit mobile version