ಸಿಂಧನೂರು

ದಲಿತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ….!

Published

on

ಸಿಂಧನೂರು: ನಗರದ ಪ್ರವಾಸಿ ಮಂದಿರದಿಂದ ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತ ಸಂಘಟನೆಗಳ ಸಮನ್ವಯ ಸಮಿತಿಯಿಂದ ತಹಶಿಲ್ದಾರ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದರು. ಈ ಮೆರವಣಿಗೆ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕುಗ್ಗಿದರು.ಲೋಕಸಭಾ ಹಾಗೂ ವಿಧಾನ ಸಭೆಗಳನ್ನು ಕತ್ತಲಲ್ಲಿಟ್ಟು ರೈತ, ದಲಿತರ.ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಪಾಸ್ ಮಾಡುವ ಮೂಲಕ ದೇಶದ ಜನತೆಗೆ ವಂಚಿಸಲಾಗುತ್ತಿದೆ.ಈ ಹಿಂದೆ ರಾಷ್ಟ್ರಪತಿ ಗಳನ್ನು ರಬ್ಬರ್ ಸ್ಟಾಂಫ್ ಎಂದು ಕೆಲವರು ಟೀಕೆ ಮಾಡುತ್ತಿದ್ದರು.ಮೋದಿಯವರ ಆಡಳಿತದಲ್ಲಿ ಲೋಕಸಭಾ ಮತ್ತು ರಾಜ್ಯಸಭೆ,ವಿಧಾನ ಸಭೆಗಳು ಕೂಡ ರಬ್ಬರ್ ಸ್ಟಾಂಫ್ ಗಳಾಗಿವೆ. ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ನಲ್ಲಿ ಬಹುಮತದ ಕೊರತೆ ಕಾರಣ ಸುಗ್ಗೀವಾಜ್ಞೆ ಮೂಲಕ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ತಯಾರಿ ನಡೆಸಿದ್ದಾರೆ.ಕೂಡಲೇ ತಿದ್ದುಪಡಿ ಕಾಯ್ದೆ ಗಳನ್ನು ಹಿಂಪಡೆಯಬೇಕು ಎಂದು ತಹಶಿಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಈ ಸಂಧರ್ಭದಲ್ಲಿ ಎಸ್. ದೇವೇಂದ್ರ ಗೌಡ,ಚಂದ್ರಶೇಖರ್ ಗೊರೆಬಾಳ್,ಡಿ.ಎಚ್.ಕಂಬಳಿ, ಗಂಗಣ್ಣ ಡಿಶ್,ದೌವಲಸಾಬ್ ದೊಡ್ಡಮನಿ,ಮೌನೇಶ್ ದೊರೆ,ನಾಗರಾಜ್ ಬಾದರ್ಲಿ,ವೆಂಕಟೇಶ ಭೋವಿ,ಸುರೇಶ್ ಕಟ್ಟಿಮನಿ,ವೀರೇಶ ಭಾವಿಮನಿ.ಭಿಮೇಶ್ ಕವಿತಾಳ ಸೇರಿದಂತೆ ಕನ್ನಡಪರ ಸಂಘಟನೆ ಗಳು, ಕನಕ ಯುವ ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಹಲವು ಸಂಘಟನೆ ಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ- ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version