Uncategorized

ರಾಜ್ಯ ಬಿಜಪಿ ಸರ್ಕಾರ “ಅನಕ್ಷರಸ್ಥ ಸರಕಾರ”- ಶಿವಾಜಿ ಮೆಟಗಾರ..!

Published

on

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾಯಕ್ /ನಾಯ್ಕಡ ಸಮಾನಾಂತರ ಸಮುದಾಯಗಳಾದ ತಳವಾರ & ಪರಿವಾರ ಜಾತಿಯ ಪ್ರಮಾಣ ಪತ್ರಕ್ಕಾಗಿ ಮಿನಿ ವಿಧಾನಸೌದದ ಮುಂಬಾಗದಲ್ಲಿ 4 ನೇ ದಿನದ ಧರಣಿ ಸತ್ಯಾಗ್ರಹವನ್ನು ಮುಂದುವರೆಸಲಾಯಿತು. ಕಂಟಕ ರಾಜಕಾರಣಿಗಳು,ತಳವಾರ&ಪರಿವಾರ ಸಮುದಾಯದ ಜಾತಿ ಪ್ರಮಾಣ ಪತ್ರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಇದು ಪ್ರಜ್ಞಾಹಿನ ಸ್ವಾರ್ಥ ರಾಜಕಾರಣ ಸರ್ಕಾರವಿದೆ ಎಂದು ಯುವ ಮುಖಂಡ ಶಿವಾಜಿ ಮೆಟಗಾರ ಗುಡಗಿದರು. ಅಧಿಕಾರಿಕಗಳು ಸುಳ್ಳು ಸುತ್ತೊಲೆಗಳ ಸರಮಾಲೆಯನ್ನೆ ಹೊರಡಿಸುತ್ತಿದ್ದಾರೆ. ಸಂವಿಧಾನದ ನೀತಿಗಳು ಸ್ವಲ್ಪ ಅರಿವಿಲ್ಲದಂತೆ ಅಧಿಕಾರಿ ವರ್ಗಗಳ ಕಾರ್ಯವಾಗಿದೆ ಎಂದು ಹೇಳಿದರು.ಕುಲಶಾಸ್ತ್ರಿಯ ಅಧ್ಯಯನ ವರದಿ ಪ್ರಕಾರ ತಳವಾರ ಮತ್ತು ಪರಿವಾರ ಸಮುದಾಯದ 12 ಲಕ್ಷ ಜನ ಇದ್ದಾರೆ ಎಂದು ವರದಿ ಮಾಡಿದ್ದಾರೆ. ಆ ವರದಿ ಪ್ರಕಾರ ಒಂದು ಆದ್ರೂ ನೈಜ ತಳವಾರ ಇರುವ ಜನರಿಗೆ ಪ್ರಮಾಣ ಪತ್ರ ಕೊಡಿ ಎಂದು ಹೇಳಿದರು. ಸಮಾಜ ಕಲ್ಯಾಣ ಸಚಿವ ಗೊವಿಂದ ಕಾರಜೊಳವರು ಸಂವಿಧಾನಕ್ಕೆ ಹುದ್ದೆಯಲ್ಲಿ ಇದ್ದು, ಒಂದು ಸಮುದಾಯಕ್ಕೆ ಕಣ್ಣಿಗೆ ಬೆಣ್ಣೆ ಒಂದು ಸಮುದಾಯದ ಕಣ್ಣಿಗೆ ಕಾರ ಹಾಕುವುದು ಯಾವ ನ್ಯಾಯ, ತಾವು ಒಂದು ಸಮುದಾಯ ಪರ ಕೆಲಸ ಬಿಟ್ಟು ಸಂವಿಧಾನ ಪರವಾಗಿ ಕೆಲಸ ಮಾಡಿ,ಯಾವುದೇ ಒಂದು ಸಮುದಾಯದ ಒತ್ತಡದಿಂದ ಭಯದಿಂದ ಸಂವಿಧಾನಕ್ಕೆ ಕಪ್ಪು ಚುಕ್ಕೆ ತರೊದು ಒಳಿತಲ್ಲ ಎಂದು ಹೇಳಿದರು. ಈ ಹೋರಾಟದಲ್ಲಿ ಮಹಿಳೆಯರು ಸಾತ್ ನೀಡಿದ್ದು ಸ್ವಲ್ಪ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಾವಣೆ ಯಾಗುತ್ತೆದೆ ಎಂದು ಹೇಳಿದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Click to comment

Trending

Exit mobile version