ಕೋಲಾರ

ಕೆಜಿಎಫ್ ಬಿಜಿಎಂಎಲ್ ಪ್ರದೇಶದಲ್ಲಿ ಖನಿಜ ನಿಕ್ಷೇಪಗಳು ಪರಿಶೋಧನೆ ಕಾರ್ಯಪ್ರಾರಂಭ..!

Published

on

ಕೋಲಾರ: ಜಗತ್ತಿಗೆ ಟನ್ ಗಟ್ಟಲೆ ಚಿನ್ನವನ್ನು ಕೊಡುಗೆ ನೀಡಿದ್ದ ಇತಿಹಾಸ ಹೊಂದಿರುವ ಕೆಜಿಎಫ್ ನಗರದ ಗೋಲ್ಡ್ ಮೈನ್ಸ್ ಸಂಸ್ಥೆಗೆ ಬೀಗ ಹಾಕಿದ ನಂತರ 20 ವರ್ಷಗಳಲ್ಲಿ ಕೆಜಿಎಫ್ ನಗರದ ಜನ್ರು ಅನುಭವಿಸಿದ ವನವಾಸ ಅಂತ್ಯವಾಗುವ ಕಾಲ ಬಂದಿದೆ. ಕೇಂದ್ರದ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಹ್ಲಾದ ಜೋಶಿ ಸೂಚನೆ ಮೇರೆಗೆ ಕೆಜಿಎಫ್ ಬಿಜಿಎಂಎಲ್ ಪ್ರದೇಶದಲ್ಲಿ ಖನಿಜ ನಿಕ್ಷೇಪಗಳು ಇರುವಿಕೆಯನ್ನು ಪತ್ತೆ ಹಚ್ಚಲು ಇಂದಿನಿಂದ ಗಣಿ ಇಲಾಖೆ ಆಧಿಕಾರಿಗಳು ಪರಿಶೋಧನೆ ಕಾರ್ಯ ಪ್ರಾರಂಭಿಸಿದ್ದಾರೆ. ಈ ಕುರಿತು ಕೇಂದ್ರ ಸಚಿವರೇ ಟ್ವೀಟ್ ಮಾಡುವ ಮೂಲಕ ಕೋಲಾರ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನೂ ಬಿಜಿಎಂಎಲ್ ಗಣಿಗಾರಿಕೆಗೆ ಉಪಯೋಗಿಸದೇ ಇರುವ 3200 ಎಕರೆ ಭೂಮಿಯಲ್ಲಿ ಖನಿಜ ನಿಕ್ಷೇಪ ಸಿಗುವ ಕುರಿತು ತಜ್ಞರ ತಂಡ ಅದ್ಯಯನ ಮಾಡಿ 6 ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ, ವರದಿ ನೋಡಿ ಕೇಂದ್ರ ಸರ್ಕಾರ ಮುಂದಿನ ಕ್ರಮ ಕೈಗೊಂಡು ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಕೊಡಲಿದೆ ಒಂದು ವೇಳೆ ಖನಿಜ ನಿಕ್ಷೇಪಗಳು ಇರುವುದು ಕಂಡು ಬಂದ್ರೆ ಗಣಿಗಾರಿಕೆಗೆ ತೆರೆದುಕೊಳ್ಳಲಿದೆ ಇಲ್ಲದಿದ್ದರೆ ಕೈಗಾರಿಕಾ ಕಾರಿಡಾರ್ ಯೋಜನೆ ಪ್ರಾರಂಭವಾಗಲಿದೆ, ಇವೆರಡರಲ್ಲಿ ಯಾವುದಾದರೂ ಬಂದರು ಉದ್ಯೋಗ ಅವಕಾಶಗಳು ಜಿಲ್ಲೆಯಲ್ಲಿ ತೆರೆದುಕೊಳ್ಳಲಿದೆ. ಬಿಜಿಎಂಎಲ್ ಒಡೆತನದ ಇದುವರೆಗೂ ಗಣಿಗಾರಿಕೆಗೆ ಉಪಯೋಗಿಸದೇ ಇರುವ 3200 ಎಕರೆ ಜಮೀನಿನಲ್ಲಿ ಕೈಗಾರಿಕಾ ಕಾರಿಡಾರ್ ಮಾಡುವ ರಾಜ್ಯ ಸರ್ಕಾರ ಬೇಡಿಕೆಗೆ ಕೇಂದ್ರ ಸರ್ಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿತು, ಕೇಂದ್ರ ಸರ್ಕಾರ ಈ ಕುರಿತು ಖಾಲಿ ಜಾಗ ಗುರುತಿಸಲು ಹಾಗೂ ಅರ್ ಟಿಸಿ ಹಾಗೂ ಎಂಅರ್ ಸಿದ್ದಪಡಿಸಿದೆ ಇನ್ನೂ ರಾಜ್ಯಸರ್ಕಾರ ಯಾವ ರೀತಿಯಾದ ಕೈಗಾರಿಕೆ ಸ್ಥಾಪನೆ ಮಾಡಬಹುದು ಎಂಬುದು ಆಧಿಕಾರಿಗಳು ಜೊತೆ ಚರ್ಚೆ ನಡೆಸಲಾಗಿದೆ.ಕೆಜಿಎಫ್ ಪ್ರದೇಶದಲ್ಲಿ ಚೆನೈ ಕಾರಿಡಾರ್ ರಸ್ತೆ ಹಾದು ಹೋಗುತ್ತೆ, ಕೈಗಾರಿಕೆಗಳ ಸ್ಥಾಪನೆಗೆ ಬೆಂಗಳೂರು ಸುತ್ತಮುತ್ತ ಭೂಮಿ ಕೊರತೆ ಇದೆ. ಇದೆಲ್ಲಾ ಕಾರಣಗಳಿಂದ ಎಲ್ಲಾ ರೀತಿಯ ಸೌಲಭ್ಯಗಳಿರುವ ಇಲ್ಲಿ ಕೈಗಾರಿಕೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಅದರಂತೆ ಕಳೆದ ಅಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರದ ಜೊತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸಮಾಲೋಚನೆ ನಡೆಸಿದ್ದು ಫಲಪ್ರದವಾಗಿ ಕೈಗಾರಿಕಾ ಕಾರಿಡಾರ್ ಯೋಜನೆ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೆಜಿಎಫ್ಗೆ ಅಗಮಿಸಿ ಪರಿಶೀಲನೆ ನಡೆಸಿ ಹೋಗಿದ್ರು.ಇದುವರೆಗೂ ಸಂಕಷ್ಟಗಳ ಸರಮಾಲೆಯಲ್ಲಿ ನರಳಿದ ಕೆಜಿಎಫ್ಗೆ ಸಮೃದ್ದಿಯ ಶುಭಕಾಲ ಆರಂಭವಾಗುವ ದಿನಗಳ ದೂರವಿಲ್ಲ,

ವರದಿ-ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Click to comment

Trending

Exit mobile version