ವಿಜಯಪುರ

ಹೊರಗುತ್ತಿಗೆ ನೌಕಕರು ವೇತನಕ್ಕಾಗಿ ಪರದಾಟ…!

Published

on

ವಿಜಯಪುರ : ನಿಂಬೆ ನಾಡಿನಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಬಾಂದ್ ಜವಾನರಾಗಿ ಹೊರಗುತ್ತಿಗೆ ಕಾರ್ಯನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ವೇತನವೇ ಇಲ್ಲ.ಇದು ನಮ್ಮ ಜೀವನ ನಿರ್ವಹಣೆಗೆ ಬಹಳ ಕಷ್ಟವಾಗುತ್ತಿದೆ ಎಂದು ಹೊರಗುತ್ತಿಗೆ ನೌಕರರು ಶಾಸಕ ಯಶವಂತರಾಯಗೌ ಪಾಟೀಲ್ ಗೆ ಮನವಿ ಪತ್ರ ಸಲ್ಲಿಸಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಬಾಂದ್ ಜವಾನರಾಗಿ ಸುಮಾರು 2 ವರ್ಷಗಳಿಂದ ಹೊರ ಗುತ್ತಿಗೆ ಆದಾರ ಮೇಲೆ Lion Security Agencies ಇವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೆವೆ. ಕೇವಲ 4 ತಿಂಗಳ ವೇತನ ಕೊಟ್ಟು 14 ತಿಂಗಳ ವೇತನ ಕೊಡದೇ ಸ್ಥಗಿತಗೊಳಿಸಿದ್ದಾರೆ. ನಾವುಗಳು ಏಜನ್ಸಿ ಸಂಪರ್ಕ ಮಾಡಿದಾಗ ಮಾನ್ಯ ಆಯುಕ್ತರಿಂದ ಯಾವುದೇ ಹಣ ಬಿಡುಗಡೆಗೊಂಡಿಲ್ಲ. ಬಿಡುಗಡೆಗೊಂಡ ತಕ್ಷಣ ವೇತನ ಮಾಡುತ್ತೆವೆ ಎಂದು ಹೇಳುತ್ತಾರೆ. ಅದರಂತೆ ಶ್ರೀ ಗುತ್ತಿ ಬಸವಣ್ಣ ಮ್ಯಾನ್ ಪವರ್ ಎಜಿನ್ಸಿ ತಾಳಿಕೋಟಿ ಯವರು 8ತಿಂಗಳು ಬಾಕಿ ಉಳಿಸಿಕೊಂಡಿದ್ದಾರೆ ಹೀಗಾದರೆ ನಾವು ಜೀವನ ನಡೆಸೊದು ಹೇಗೆ ? ನಮ್ಮ ಕುಟುಂಬಗಳು ಅರ್ಥಿಕವಾಗಿ ಹಿಂದುಳಿದಿದ್ದು ನಮ್ಮ ಕುಟುಂಬ ನಮ್ಮ ವೇತನ ಮೇಲೆ ಅವಲಂಬಿತವಾಗಿದ್ದೆವೆ ಕೂಡಲೇ ನಮಗೆ ನ್ಯಾಯ ಕೊಡಿಸಿ ಎಂದು ಕಳಿಕಳಿಯಿಂದ ವಿನಂತಿಸಿಕೊಂಡರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ..

Click to comment

Trending

Exit mobile version