ಬೆಂಗಳೂರು

ಕಾರು ಸ್ಟಾರ್ಟ್ ಮಾಡಿ ಪ್ರಾಣ ಕಳೆದುಕೊಂಡ ಮಹಿಳೆ ..!

Published

on

ಬೆಂಗಳೂರು : ಕಾರು ಸ್ಟಾರ್ಟ್ ಮಾಡಿ ಮಹಿಳೆ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನ ನ್ಯೂ ಬಿಇಎಲ್ ನಲ್ಲಿ ನಡೆದಿದೆ. ಆರ್.ಕೆ ಪಾರ್ಕ್ ನಿವಾಸಿಯಾದ ನಂದಿನಿ ರಾವ್ ತನ್ನ ಕಾರು ಬಾಗಿಲು ತೆರೆದು ಕಾರ್ ಅನ್ನು ಸ್ಟಾರ್ಟ್ ಮಾಡಿದ್ದಾರೆ. ಈ ವೇಳೆ ರಿವರ್ಸ್ ಗೇರ್ನಲ್ಲಿದ್ದ ಕಾರಣ ಕಾರು ಹಿಂಭಾಗವಾಗಿ ಚಲಿಸಿದೆ, ಕಾರಿನ ಡೋರ್ ತೆರೆದಿದ್ದ ಹಿನ್ನೆಲೆ ಅಲ್ಲೇ ಇದ್ದ ಮರಕ್ಕೆ ಮಹಿಳೆ ಸಿಲುಕಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದು ಹೋಗುವ ಸಮಯದಲ್ಲಿ ದಾರಿಯ ಮಧ್ಯದಲ್ಲೇ ಮಹಿಳೆ ಮೃತಪಟ್ಟಿದ್ದಾರೆ.ಘಟನೆ ಸಂಬಂಧ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version