ತಿಪಟೂರು

ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಸರಳವಾಗಿ ಆಚರಿಸಲು ನಿರ್ಧಾರ..!

Published

on

ತಿಪಟೂರು: ಸುಪ್ರಸಿದ್ಧ ತಿಪಟೂರು ಸತ್ಯಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಈ ಬಾರಿ ಕೋವಿಡ್ 19 ರ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಸರಳವಾಗಿ ಆಚರಿಸಲು ಆಡಳಿತ ಮುನ್ನಡೆ ನಿರ್ಧರಿಸಿದೆ. 91ನೇ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಇದೇ ಭಾನುವಾರ ದಿನಾಂಕ 11- 10 – 2020 ರಂದು ನಿರ್ಧರಿಸಿದ್ದು ಆಚರಣೆಗೆ ಕೊರೋನಾ ಅಡ್ಡಿಯಾಗಿದ್ದು ಜನರಿಗೆ ನಿರಾಸೆಯನ್ನುಂಟು ಮಾಡಿದೆ. ಲಕ್ಷಾಂತರ ಜನರು ಭಾಗವಹಿಸುತ್ತಿದ್ದ ಈ ವಿಸರ್ಜನಾ ಮಹೋತ್ಸವಕ್ಕೆ ಈ ಬಾರಿ ಕೇವಲ ನೂರು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದ ನೂರು ಜನರಿಗೆ ಮಾತ್ರ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಬಹುದಾಗಿದೆ. ಸತ್ಯ ಗಣಪತಿಯ ಉತ್ಸವ ಸಾಗುವ ದಾರಿಯಲ್ಲಿ ಪೂಜೆ ಮಾಡಲು ಕರ್ಪೂರ ಹಚ್ಚಲು ಹೂವಿನ ಹಾರ ಹಾಕಲು ಪಟಾಕಿ ಸುಡಲು ಅವಕಾಶ ಇರುವುದಿಲ್ಲ. ಉತ್ಸವದಲ್ಲಿ ಸಾಂಕೇತಿಕವಾದ ವಾದ್ಯಗಳನ್ನು ಹೊರತುಪಡಿಸಿ ಕಲಾತಂಡಗಳು ಡಿಜೆ ಸೌಂಡ್ಸ್ ಗುಂಪು ನೃತ್ಯಗಳಿಗೆ ಅವಕಾಶ ಇರುವುದಿಲ್ಲ.ಭಕ್ತಾದಿಗಳು ಪೂಜೆ ಮಾಡಿಸಿಕೊಳ್ಳಲು ಇಚ್ಛಿಸುವವರು ಭಾನುವಾರಕ್ಕೆ ಮುಂಚಿತವಾಗಿ ಬಂದು ಪೂಜೆ ಮಾಡಿಸಿಕೊಳ್ಳಬೇಕು ಮತ್ತು ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು

Click to comment

Trending

Exit mobile version